ವಾಶಿಂಗ್ಟನ್: ರೈಲು ಹಳಿ ತಪ್ಪಿ ಕನಿಷ್ಠ 6 ಸಾವು
ಲಾಸ್ ಏಂಜಲಿಸ್ (ಅಮೆರಿಕ), ಡಿ. 19: ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿ ಸೋಮವಾರ ಮುಂಜಾನೆ ಪ್ರಯಾಣಿಕ ರೈಲೊಂದು ಹಳಿತಪ್ಪಿದ ಘಟನೆಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.
ಪ್ರಯಾಣ ಅವಧಿಯನ್ನು ತಗ್ಗಿಸಲು ಟಕೋಮ ಮತ್ತು ಒಲಿಂಪಿಯ ನಗರಗಳ ನಡುವೆ ಹೊಸದಾಗಿ ನಿರ್ಮಿಸಲಾದ ಹಳಿಯಲ್ಲಿ ರೈಲುಗಳು ಪ್ರಯಾಣಿಸಲು ಆರಂಭಿಸಿದ ಮೊದಲ ದಿನವೇ ಈ ಅಪಘಾತ ಸಂಭವಿಸಿದೆ.
ರೈಲು ಬೆಳಗ್ಗೆ ಸುಮಾರು 7:30ಕ್ಕೆ ಡುಪೊಂಟ್ನಲ್ಲಿ ಹಳಿ ತಪ್ಪಿತು ಎಂದು ಅಧಿಕಾರಿಗಳು ಹೇಳಿದರು. ಸುಮಾರು 70 ಪ್ರಯಾಣಿಕರು ರೈಲಿನಲ್ಲಿದ್ದರು.
Next Story