ಈ ವಾರ ಚೀನಾ-ಭಾರತ ಗಡಿ ಮಾತುಕತೆ

ಬೀಜಿಂಗ್, ಡಿ. 19: ಭಾರತ ಮತ್ತು ಚೀನಾಗಳ ನಡುವಿನ ಇನ್ನೊಂದು ಸುತ್ತಿನ ಗಡಿ ಮಾತುಕತೆ ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆಯಲಿದೆ. ಇದು 73 ದಿನಗಳ ಡೋಕಾ ಲಾ ಬಿಕ್ಕಟ್ಟಿನ ಬಳಿಕ ಉಭಯ ದೇಶಗಳ ನಡುವೆ ನಡೆಯುತ್ತಿರುವ ಪ್ರಥಮ ಗಡಿ ಮಾತುಕತೆಯಾಗಿದೆ.
ಗಡಿಯಲ್ಲಿ ಬಿಕ್ಕಟ್ಟು ನಿರ್ವಹಣೆ, ಸೇನೆಗಳ ನಡುವೆ ಹಾಟ್‌ಲೈನ್ (ನೇರ ಫೋನ್) ಸಂಪರ್ಕವನ್ನು ಏರ್ಪಡಿಸುವುದು ಮತ್ತು ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಸಂಧಾನಗಳನ್ನು 20ನೆ ಸುತ್ತಿನ ಎಸ್‌ಆರ್ ಮಟ್ಟದ ಮಾತುಕತೆಯಲ್ಲಿ ನಿರೀಕ್ಷಿಸಲಾಗಿದೆ.
ಚೀನಾದ ಸರಕಾರಿ ಸಲಹಾಕಾರ ಯಾಂಗ್ ಜೀಚಿ ರಾಜತಾಂತ್ರಿಕರ ತಂಡದೊಡನೆ ಮಾತುಕತೆಗಾಗಿ ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹಾಕಾರ ಎ.ಕೆ. ದೋವಲ್ ನೇತೃತ್ವದ ತಂಡ ಚೀನಾ ನಿಯೋಗದ ಜೊತೆ ಮಾತುಕತೆ ನಡೆಸಲಿದೆ.
ಚೀನಾ ಮತ್ತು ಭಾರತದ ನಡುವಿನ ಎಸ್‌ಆರ್ ಮಟ್ಟದ ಮಾತುಕತೆಗಳು 2003ರಲ್ಲಿ ಆರಂಭವಾಗಿರುವುದನ್ನು ಸ್ಮರಿಸಬಹುದಾಗಿದೆ.
Next Story





