ಭಾರತ ಮೂಲದ ಬ್ಯಾಂಕ್ ಉದ್ಯೋಗಿಗೆ ಜೈಲು

ಲಂಡನ್, ಡಿ. 19: ಕಳ್ಳ ಸಾಫ್ಟ್‌ವೇರ್ ಬಳಸಿ ಕದಿಯಲಾದ 2.5 ಮಿಲಿಯ ಪೌಂಡ್ (ಸುಮಾರು 21.38 ಕೋಟಿ ರೂಪಾಯಿ) ಗೂ ಅಧಿಕ ಮೊತ್ತವನ್ನು ಬಿಳುಪು ಮಾಡಲು ಸಹಕರಿಸಿದ ಬಾರ್ಕ್‌ಲೇಸ್ ಬ್ಯಾಂಕ್‌ನ ಭಾರತ ಮೂಲದ ಉದ್ಯೋಗಿಯೋರ್ವನಿಗೆ 6 ವರ್ಷ ಮತ್ತು 4 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪವೇಲ್ ಗಿಂಕೋಟ ಮತ್ತು ಅಯಾನ್ ಟರ್ಕನ್ ಎಂಬ ಕಪ್ಪು ಹಣ ಬಿಳುಪುಮಾಡುವವರಿಗೆ 29 ವರ್ಷದ ಜಿನಲ್ ಪೇಠದ್ ‘ಪರ್ಸನಲ್ ಬ್ಯಾಂಕ್ ಮ್ಯಾನೇಜರ್’ ಆಗಿ ಕೆಲಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಉದ್ದೇಶಕ್ಕಾಗಿ ಆತ ನಕಲಿ ಗುರುತುಪತ್ರಗಳನ್ನು ಬಳಸಿ 105 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದನು.
Next Story





