ಬ್ರಾಡ್ಮನ್ ಸಾಧನೆ ಸರಿಗಟ್ಟುವತ್ತ ಸ್ಮಿತ್

ದುಬೈ,ಡಿ.19: ಪರ್ತ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್‌ನಲ್ಲಿ ದ್ವಿಶತಕ (239 ರನ್) ಸಿಡಿಸಿ ತಂಡದ ಸರಣಿ ಗೆಲುವಿಗೆ ಕಾಣಿಕೆ ನೀಡಿದ ಸ್ಮಿತ್ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ ಹೊಸ ಎತ್ತರಕ್ಕೇರಿದ್ದಾರೆ. ಒಟ್ಟು 945 ಅಂಕ ಗಳಿಸುವ ಮೂಲಕ ತಮ್ಮದೇ ದೇಶದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್(961 ಅಂಕ) ದಾಖಲೆ ಸರಿಗಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ರ್ಯಾಂಕಿಂಗ್ ಪಾಯಿಂಟ್‌ನಲ್ಲಿ ಲೆನ್ ಹಟ್ಟನ್‌ರೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಪರ್ತ್ ಟೆಸ್ಟ್‌ನ ಬಳಿಕ ಏಳಂಕವನ್ನು ಗಳಿಸಿರುವ ಸ್ಮಿತ್ ಅವರು ಪೀಟರ್ ಮೇ, ರಿಕಿ ಪಾಂಟಿಂಗ್ ಹಾಗೂ ಜಾಕ್ ಹಾಬ್ಸ್‌ರನ್ನು ಹಿಂದಿಕ್ಕಿದ್ದಾರೆ.
Next Story





