ಅಪರಾಧ ಸುದ್ದಿಗಳ ನಿರೂಪಕ ಶುಹೈಬ್ ಇಲ್ಯಾಸಿಗೆ ಜೀವಾವಧಿ ಶಿಕ್ಷೆ

ಹೊಸದಿಲ್ಲಿ, ಡಿ.20: ಹದಿನೇಳು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ‘ಇಂಡಿಯಾಸ್ ಮೋಸ್ಟ್ ವಾಂಟೆಂಡ್’ ಕ್ರೈಂ ಸೀರಿಸ್ ನ ನಿರೂಪಕ ಶುಹೈಬ್ ಇಲ್ಯಾಸಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಶುಹೈಬ್ ದೋಷಿ ಎಂದು ದಿಲ್ಲಿ ಕೋರ್ಟ್ ಡಿಸೆಂಬರ್ 16ರಂದು ತೀರ್ಪು ನೀಡಿತ್ತು. 2000ನೆ ಇಸವಿಯ ಜನವರಿ 11ರಂದು ಶುಹೈಬ್ ಪತ್ನಿ ಅಂಜು ಇಲ್ಯಾಸಿಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರ ದೇಹದ ಮೇಲೆ ಇರಿದ ಗಾಯಗಳ ಗುರುತುಗಳಿದ್ದವು. ಆರಂಭದಲ್ಲಿ ಅಂಜು ಸಾವನ್ನು ಆತ್ಮಹತ್ಯೆ ಎನ್ನಲಾಗಿತ್ತು.
ಆದರೆ ಕೆಲ ತಿಂಗಳುಗಳ ನಂತರ ಅಂಜುರ ತಾಯಿ ಹಾಗು ಸಹೋದರಿ ಈ ಪ್ರಕರಣದ ಬಗ್ಗೆ ತನಿಕೆ ನಡೆಸುವಂತೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರನ್ನು ಒತ್ತಾಯಿಸಿದ್ದರು. ನಂತರ ಪ್ರಕರಣವನ್ನು ತಿರುವನ್ನು ಪಡೆದುಕೊಂಡಿತ್ತು.
ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶುಹೈಬ್ ಹೇಳಿದ್ದ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾದ ನಂತರ ಆತನನ್ನು ಬಂಧಿಸಲಾಗಿತ್ತು.
Next Story





