ಡಿ. 21ರಿಂದ ಕೋಡಪದವು ಎಸ್ಸೆಸ್ಸೆಫ್ ಶಾಖೆಯ ವಾರ್ಷಿಕೋತ್ಸವ
ಬಂಟ್ವಾಳ, ಡಿ. 20: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಕೋಡಪದವು ಶಾಖೆಯ 6 ನೆ ವಾರ್ಷಿಕೋತ್ಸವದ ಅಂಗವಾಗಿ ಮರ್ಕರ್ ಕನ್ನಡ ವಿದ್ಯಾರ್ಥಿಗಳ ಸಂಘಟನೆಯಾದ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್ ಕೆಎಸ್‌ಒ ಇದರ ಸಹಭಾಗಿತ್ವದಲ್ಲಿ ಡಿ. 21, 22ರಂದು "ಟ್ಯಾಲೆಂಟರ್ಸ್ 2017" ಎಂಬ ಇಸ್ಲಾಮಿಕ್ ಆರ್ಟ್ ಫೆಸ್ಟ್ ಕೋಡಪದವು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಉಮರ್ ಅಮ್ಜದಿ ಕುಕ್ಕಿಲ ತಿಳಿಸಿದ್ದಾರೆ.
ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಡಿ. 21ರಂದು ಬೆಳಗ್ಗೆ ಸ್ವಬಾಹುಲ್ ಖೈರ್ ಕಾರ್ಯಕ್ರಮ ಮತ್ತು ಸುಲೈಮಾನ್ ಹಾಜಿ ಕುಕ್ಕಿಲ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಅಂದು ಮಗ್ರಿಬ್ ನಮಾಝಿನ ಬಳಿಕ ಮರ್ಕರ್ ಕನ್ನಡ ವಿದ್ಯಾರ್ಥಿಗಳಿಂದ ನಾತೇ ಶರೀಫ್, ಪಬ್ಲಿಕ್ ಟಾಕ್, ಆಶಯ ಸಂವಾದ, ಡಿಬೆಟ್ ಮತ್ತು ಕವಾಲಿ ಪ್ರದರ್ಶನವು ನಡೆಯಲಿದೆ ಎಂದರು.
ರಾತ್ರಿ 9 ಗಂಟೆಗೆ ಸರಿಯಾಗಿ ಸೈಯದ್ ಝೈನುಲ್ ಆಬಿದೀನ್ ತಂಙಳ್ ಎಮ್ಮೆಮ್ಮಾಡು ಅವರ ದುಆ ಆಶೀರ್ವಚನದೊಂದಿಗೆ ಗೌರವಾರ್ಪಣಾ ಸಮಾರಂಭ ಆರಂಭಗೊಳ್ಳಲಿದೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾ ವಿಪಿಎಂ ಫೈಝಿ ವಿಲ್ಯಾಪಳ್ಳಿ ಉಸ್ತಾದರನ್ನು ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಸನ್ಮಾನಿಸುವರು. ಗೌರವಾರ್ಪಣಾ ಸಮಾರಂಭವನ್ನು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಉಧ್ಘಾಟಿಸಲಿದ್ದು ಹಾಗೂ ಸಿ.ಎಚ್. ಮುಹಮ್ಮದಲಿ ಸಖಾಫಿ ಸುರಿಬೈಲ್ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.
ಡಿ. 22ರಂದು ಬೆಳಗ್ಗೆ ಖಬರ್ ಝಿಯಾರತ್ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಕಂಬಳಬೆಟ್ಟು ದರ್ಗಾ ಶರೀಫಿನಿಂದ ಕೋಡಪದವು ತನಕ ವಾಹನ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಕೋಡಪದವು ಜಂಕ್ಷನ್ ನಿಂದ ಮೈದಾನದ ತನಕ ಕಾಲ್ನಡಿಗೆ ಜಾಥಾ ನಡೆಯಲಿದೆ. ನಂತರ ಮಗ್ರಿಬ್ ನಮಾಝಿನ ಬಳಿಕ ಬುರ್ದಾ ಮಜ್ಲಿಸ್, ಅರೆಬಿಕ್ ನಶೀದಾ, ಕ್ರಾಂತಿಗೀತೆ ಹಾಗೂ ಬಹುಭಾಷಾ ಭಾಷಣಗಳು ನಡೆಯಲಿದೆ ಎಂದರು.
ರಾತ್ರಿ 9 ಗಂಟೆಗೆ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಸಮಾರೋಪ ಸಮಾರಂಭವು ಮರ್ಕರ್ ಸ್ಟೂಡೆಂಟ್ ಯೂನಿಯನ್ ಇದರ ಅಧ್ಯಕ್ಷ ಅಸ್ಸಯ್ಯದ್ ಮುಝಮ್ಮಿಲ್ ತಂಙಳ್ ತಿರೂರ್ ಕಾಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ ಅವರು ನಿರ್ವಹಿಸಲಿದ್ದಾರೆ ಮತ್ತು ಸಂದೇಶ ಭಾಷಣವನ್ನು ಶೈಖುನಾ ವಾಲೆಮೊಂಡೊವು ಉಸ್ತಾದ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಪಿ.ಟಿ. ಮುಹಮ್ಮದ್ ರಂಡತ್ತಾನಿ ಮಾಡಲಿದ್ದಾರೆ. ಸಮಾರಂಭದ ಮುಖ್ಯ ಪ್ರಭಾಷಣವನ್ನು ಮರ್ಕರ್ ವೈಸ್ ಚಾನ್ಸಲರ್ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮಲ್ಲಿ ಇಬ್ರಾಹಿಂ ಫೈಝಿ ಕನ್ಯಾನ, ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಕೆಮ್ಮಾಯಿ, ಹಾಫಿಲ್ ಅಹ್ಮದ್ ಸಖಾಫಿ ಮಳಲಿ ಹಾಗೂ ಜುನೈದ್ ಸಖಾಫಿ ಬೆಳ್ಮ ಇತ್ಯಾದಿ ಉಲಮಾ ಮತ್ತು ಉಮರಾ ಪ್ರಮುಖರು ಹಾಗೂ ಸಂಘಟನಾ ಧುರೀನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಹಸನ್ ಸಅದಿ ಕುಕ್ಕಿಲ, ನಾಯಕರಾದ ಮುಸ್ತಫಾ ಕೋಡಪದವು, ರಹೀಂ ಸಖಾಫಿ ವಿಟ್ಲ, ರಝಾಕ್ ಮದಕ ಉಪಸ್ಥಿತರಿದ್ದರು.







