ಮೋದಿಯನ್ನು 'ಜಗತ್ತಿನ ಅತ್ಯಂತ ಭ್ರಷ್ಟ ಪ್ರಧಾನಿ' ಎಂದ ಬಿಜೆಪಿ ಸಚಿವ

ಹೊಸದಿಲ್ಲಿ, ಡಿ.20: ಮಾತನಾಡುವ ಭರದಲ್ಲಿ ಬಾಯ್ತಪ್ಪಿನಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು 'ಜಗತ್ತಿನ ಅತ್ಯಂತ ಭ್ರಷ್ಟ ಪ್ರಧಾನಿ' ಎಂದು ರಾಜಸ್ಥಾನದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ.ಜಸ್ವಂತ್ ಸಿಂಗ್ ಯಾದವ್ ಹೇಳಿರುವುದಾಗಿ indiatoday.intoday.in ವರದಿ ಮಾಡಿದೆ.
ರಾಜಸ್ಥಾನದ ಆಲ್ವಾರ್ ನಲ್ಲಿ ಕೃಷಿ ವ್ಯಾಪಾರ ಕೇಂದ್ರವೊಂದನ್ನು ಉದ್ಘಾಟಿಸಿ ಗುಜರಾತ್ ಹಾಗು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದರು. “ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರು ಜಗತ್ತಿನ ಅತ್ಯಂತ ಭ್ರಷ್ಟ ಪ್ರಧಾನಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರೀ ಬಹುಮತದೊಂದಿಗೆ ಎರಡೂ ರಾಜ್ಯಗಳಲ್ಲಿ ನಮ್ಮ ಸರಕಾರ ಸ್ಥಾಪನೆಯಾಗಲಿದೆ” ಎಂದು ಜಸ್ವಂತ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.
ಮಾತನಾಡುವ ಭರದಲ್ಲಿ ಬಾಯ್ತಪ್ಪಿನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಗತ್ತಿನ ಅತ್ಯಂತ ಭ್ರಷ್ಟ ಪ್ರಧಾನಿ ಎಂದು ಜಸ್ವಂತ್ ಸಿಂಗ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Next Story





