ಡಿ.22: ಉಡುಪಿ ನಗರಸಭೆ ಬಜೆಟ್ ಸಮಾಲೋಚನಾ ಸಭೆ
ಉಡುಪಿ, ಡಿ.20: ಕರ್ನಾಟಕ ಪುರಸಭಾ ಲೆಕ್ಕಪತ್ರ ನಿಯಮಗಳ ಅನ್ವಯ ಉಡುಪಿ ನಗರಸಭೆಯ ಪ್ರಸಕ್ತ ಸಾಲಿನ ಬಜೆಟ್ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಕ್ಕಾಗಿ ಮೊದಲ ಸುತ್ತಿನ ಬಜ್ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಡಿ.22ರಂದು ಅಪರಾಹ್ನ 3:30ಕ್ಕೆ ನಗರಸಭಾ ಸಭಾಂಗಣದಲ್ಲಿ ನಡೆಯಲಿದೆ.
ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಉಪಯುಕ್ತ ಮಾಹಿತಿ ಹಾಗೂ ಸಲಹೆಗಳನ್ನು ನೀಡಿ, ನಗರಸಭೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಭಾಗಿಗಳಾಗಿ ಸಹಕರಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ
Next Story





