ಸಹಬಾಳ್ವೆಯ ಜೀವನಕ್ಕೆ ಅಂತರ್ಮುಖಿ ಚಿಂತನೆ ಅಗತ್ಯ: ಸ್ವಾಮಿ ಮಧುಸೂದನಾನಂದ ಪುರಿ
ಬೆಂಗಳೂರು, ಡಿ.20: ಸಮಾಜದಲ್ಲಿರುವ ಜಾತಿ, ಧರ್ಮ, ವರ್ಗ ಹಾಗೂ ವರ್ಣಗಳೆಂಬ ಭೇದ ಭಾವ ಹೋಗಲಾಡಿಸಿ ಸಹಬಾಳ್ವೆಯ ಜೀವನ ರೂಪಿಸಿಕೊಳ್ಳುವವರಿಗೆ ಅಂತರ್ಮುಖಿ ಚಿಂತನೆ ಅಗತ್ಯವೆಂದು ಓಂಕಾರ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಸ್ವಾಮಿ ಮಧುಸೂದನಾನಂದ ಪುರಿ ಹೇಳಿದರು.
ಬುಧವಾರ ಹಿಂದೂಸ್ಥಾನ್ ಗಗನ್ ಗೌರವ್ ಜ್ಯೋತಿರ್‌ಲಿಂಗ್ ಪೌಂಡೇಷನ್, ವರ್ಲ್ಡ್ ಹೆಲ್ತ್ ಹಾರ್ಟ್ ಡಯಾಬಿಟಿಕ್ ಕ್ಯಾನ್ರ್ ಮತ್ತು ಏಡ್ಸ್ ೌಂಡೇಷನ್, ಬೆಂಗಳೂರು ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್ ಟೆಂಪಲ್ ಆ್ ಸಕ್ಸಸ್ ವತಿಯಿಂದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ನಡೆದಾಡುವ ಶಬ್ದಕೋಶ ಪ್ರೊ.ಜಿ.ವೆಂಕಟಸುಬ್ಬಯ್ಯಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯರು ಮೊದಲು ತಮ್ಮನ್ನು ತಾವು ತಿದ್ದಿಕೊಂಡಾಗ ಮಾತ್ರ ಪ್ರಪಂಚ ಅರ್ಥವಾಗುತ್ತದೆ. ಪ್ರತಿಯೊಬ್ಬರೂ ಸಹಬಾಳ್ವೆಯಿಂದ ಸಾಮರಸ್ಯ ಜೀವನ ನಡೆಸಲು ನೆರವಾಗುತ್ತದೆ. ಹಾಗಾಗಿ ಎಲ್ಲರೂ ಭಗವಂತನ ಸ್ವರೂಪಿಗಳಾದರೆ ಒಳ, ಹೊರ ಪ್ರಪಂಚ ಅರ್ಥ ಮಾಡಿಕೊಂಡು ಸುಖಮಯ ಜೀವನ ಸಾಗಿಸಬಹುದು. ಅದು ಮುಂದಿನ ಪೀಳಿಗೆಗೂ ಮಾರ್ಗದರ್ಶನ ಆಗಲಿದೆ. ಅನುಸರಣೆ ಆದರ್ಶಕ್ಕೆ ದಾರಿಯಾಗಲಿದೆ ಎಂದು ಅವರು ಹೇಳಿದರು.
ನಮ್ಮ ಬಗ್ಗೆ, ಸಮಾಜದ ಬಗ್ಗೆ, ಸಮಾಜ ತಮ್ಮನ್ನು ನೋಡುವ ರೀತಿ, ನಾವು ಸಮಾಜಕ್ಕೆ ನೀಡುವ ಕೊಡುಗೆ ಈ ಅಂಶಗಳನ್ನು ಒಬ್ಬ ವ್ಯಕ್ತಿ ಅಳವಡಿಸಿಕೊಂಡರೆ ಎಲ್ಲವೂ ಸುಲಲಿತವಾಗಿ ಸಾಗುತ್ತದೆ. ಹಾಗಾಗಿ ಈ ಅಂಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ನಡೆದಾಡುವ ಶಬ್ದಕೋಶ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯಗೆ 105 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಪೌಂಡೇಷನ್ ಅಧ್ಯಕ್ಷ ಡಾ.ಚಿನ್ನಸ್ವಾಮಿ ಜಗನ್ನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







