Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಂಕಣ ರೈಲಿನಲ್ಲಿ ಕಳೆದುಕೊಂಡ ಬ್ಯಾಗ್...

ಕೊಂಕಣ ರೈಲಿನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಪಡೆದ ಪ್ರವಾಸಿ ವಿದೇಶಿ ಮಹಿಳೆ

ವಾರ್ತಾಭಾರತಿವಾರ್ತಾಭಾರತಿ20 Dec 2017 10:07 PM IST
share
ಕೊಂಕಣ ರೈಲಿನಲ್ಲಿ ಕಳೆದುಕೊಂಡ ಬ್ಯಾಗ್ ಮರಳಿ ಪಡೆದ ಪ್ರವಾಸಿ ವಿದೇಶಿ ಮಹಿಳೆ

ಉಡುಪಿ, ಡಿ.20: ಭಾರತದ ಪ್ರವಾಸಕ್ಕೆ ಆಗಮಿಸಿದ ಆಸ್ಟ್ರೇಲಿಯ ಮೆಲ್ಬೋರ್ನ್‌ನ ಐಮ್ಮಿ ಲೋಮಾಕ್ಸ್ ಎಂಬ ಮಹಿಳೆ ಗಡಿಬಿಡಿಯಲ್ಲಿ ಮಂಗಳೂರಿಗೆ ತೆರಳುವ ರೈಲಿನಲ್ಲಿ ಬಿಟ್ಟಿದ್ದ ತನ್ನ ಅಮೂಲ್ಯ ವಸ್ತುಗಳಿದ್ದ ಬ್ಯಾಗ್‌ನ್ನು ಕೊಂಕಣ ರೈಲ್ವೆ ಅಧಿಕಾರಿಗಳು ಕಾರವಾರದಲ್ಲಿ ಪತ್ತೆ ಹಚ್ಚಿ ಮತ್ತೆ ಮಹಿಳೆಗೆ ಹಿಂದಿರುಗಿಸಿದ ಘಟನೆ ಮಡಗಾಂವ್‌ನಲ್ಲಿ ಸೋಮವಾರ ನಡೆದಿದೆ.

ಮಡಗಾಂವ್‌ನಲ್ಲಿ ಮುಂಬೈಗೆ ತೆರಳುವ ರೈಲು ಏರಬೇಕಾಗಿದ್ದ ಇವರು, ಗಡಿಬಿಡಿಯಲ್ಲಿ ಮಂಗಳೂರಿಗೆ ತೆರಳುವ ಸಿಎಸ್‌ಎಂಟಿ-ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೇರಿದ್ದರು. ಅವರಿಗೆ ತಮ್ಮ ತಪ್ಪು ಗೊತ್ತಾಗುವಷ್ಟರಲ್ಲಿ ರೈಲು ಚಲಿಸಲಾರಂಭಿಸಿತ್ತು. ಮತ್ತೆ ಗಡಿಬಿಡಿಯಲ್ಲಿ ಅವರು ಬ್ಯಾಗ್‌ನ್ನು ಬಿಟ್ಟು ಚಲಿಸುವ ರೈಲಿನಿಂದ ಕೆಳಗೆ ಧುಮುಕಿದ್ದರು. ಕೆಳಗಿಳಿದ ಮೇಲೆ ಅವರಿಗೆ ಬ್ಯಾಗ್‌ನ್ನು ರೈಲಿನಲ್ಲಿ ಬಿಟ್ಟಿರುವುದು ಅರಿವಿಗೆ ಬಂತು.

ಆತಂಕದ ಮನಸ್ಥಿತಿಯಲ್ಲಿ ಅವರು ಮಡಗಾಂವ್‌ನ ರೈಲ್ವೆ ಪೊಲೀಸ್ ಪಡೆಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ರೈಲು ನಿಲ್ದಾಣದ ದ್ರತಾ ನಿಯಂತ್ರಣ ಕೊಠಡಿ, ಕೊಂಕಣ ರೈಲ್ವೆಯ ಪ್ರಧಾನ ಕಚೇರಿಗೆ ಮಾಹಿತಿ ತಲುಪಿಸಿತು. ಅಲ್ಲಿಂದ ಕಾರವಾರದ ರೈಲ್ವೆ ಪೊಲೀಸರಿಗೆ ಮಾಹಿತಿ ಹೋಗಿ, ಮಹಿಳೆಯ ಬ್ಯಾಗ್‌ಗಾಗಿ ರೈಲಿನಲ್ಲಿ ಹುಡುಕುವಂತೆ ಸೂಚನೆ ನೀಡಲಾಯಿತು.

ಮಾಹಿತಿ ಪಡೆದ ಕಾರವಾರ ರೈಲ್ವೆ ಪೊಲೀಸ್ ರೂಪಾ ನಾಯಕ್ ಅವರು ರೈಲು ಕಾರವಾರಕ್ಕೆ ಬಂದಾಗ ತಕ್ಷಣ ಬೋಗಿಗೆ ತೆರಳಿ ಹುಡುಕಿದಾಗ ಐಮ್ಮಿ ಅವರಿಟ್ಟ ಸ್ಥಳದಲ್ಲಿ ಬೆನ್ನಿಗೆ ಹಾಕುವ ಬ್ಯಾಗ್ ಇರುವುದು ಕಂಡುಬಂತು. ರೂಪಾ ನಾಯಕ್ ಬ್ಯಾಗ್‌ನ್ನು ಪಡೆದು ಮುಂಬೈ ಕಚೇರಿಗೆ ಮಾಹಿತಿ ನೀಡಿದರು. ಬ್ಯಾಗ್ ಕಳೆದುಕೊಂಡ ಮಹಿಳೆಗೂ ಅದು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಲಾಯಿತು.

ಮಡಗಾಂವ್‌ನಿಂದ ಮುಂಬೈಗೆ ತೆರಳಲು ಮಾಂಡೋವಿ ಎಕ್ಸ್‌ಪ್ರೆಸ್ ರೈಲು ಏರಬೇಕಿದ್ದ ಐಮ್ಮಿ, ವಿರುದ್ಧ ದಿಕ್ಕಿಗೆ ತೆರಳುವ ಸಿಎಸ್‌ಐಟಿ-ಮಂಗಳೂರು ರೈಲನ್ನೇರಿದ್ದರು. ತಕ್ಷಣ ಅವರನ್ನು ಕಾರವಾರಕ್ಕೆ ತೆರಳಿ ಬ್ಯಾಗ್‌ನ್ನು ಪಡೆದುಕೊಳ್ಳುವಂತೆ ತಿಳಿಸಲಾಯಿತು. ಬ್ಯಾಗ್‌ನಲ್ಲಿ ಆಕೆಯ ಪಾಸ್‌ಪೋರ್ಟ್, ಆ್ಯಪಲ್ ಐಪ್ಯಾಡ್, ಸೋನಿ ಕೆಮರಾ, 3,300ರೂ. ಭಾರತೀಯ ಕರೆನ್ಸಿ, ಇದ್ದು, ಇವುಗಳ ಒಟ್ಟು ಮೌಲ್ಯ ಒಂದು ಲಕ್ಷ ರೂ.ಗಳಿಗೂ ಅಧಿಕವಿತ್ತು. ಕೂಡಲೇ ಕಾರವಾರಕ್ಕೆ ಬಂದು ತನ್ನ ಬ್ಯಾಗ್‌ನ್ನು ಪಡೆದುಕೊಂಡರು.

ಅಂದೇ ರಾತ್ರಿ ಮುಂಬೈಯಿಂದ ಆಸ್ಟ್ರೇಲಿಯಕ್ಕೆ ಮರಳಬೇಕಾಗಿದ್ದ ಐಮ್ಮಿ, ಕೊಂಕಣ ರೈಲ್ವೆ ಅಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿ, ಲಭ್ಯವಿದ್ದ ಮುಂದಿನ ರೈಲಿನಲ್ಲಿ ಕಾರವಾರದಿಂದ ಮುಂಬೈಗೆ ಪ್ರಯಾಣ ಬೆಳೆಸಿದರು ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X