ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯ ಕೊಲೆ
ಬೆಂಗಳೂರು, ಡಿ.20: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯ ಮೇಲೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಕೊತ್ತನೂರಿನ ತಿಮ್ಮಣ್ಣ ಲೇಔಟ್‌ನಲ್ಲಿ ನಡೆದಿದೆ ಎನ್ನಲಾಗಿದೆ
ನಗರದ ತಿಮ್ಮಣ್ಣ ಲೇಔಟ್‌ನ ಅಶೋಕ ನಗರ ಅಪಾರ್ಟ್‌ಮೆಂಟ್ ಬಳಿಯ ನಿವಾಸಿ ನಾಗರಾಜು (50) ಎಂಬುವರನ್ನ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಮನೋಹರ, ಹರೀಶ್ ಹಾಗೂ ಅಪ್ಪುಎಂಬಾತನಿಗಾಗಿ ಕೊತ್ತನೂರು ಠಾಣಾ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
Next Story





