ಕಿನ್ಯ ಸೆಕ್ಟರ್ ಮಟ್ಟದ ಪ್ರತಿಭೋತ್ಸವ

ಮಂಗಳೂರು, ಡಿ. 20: ಎಸೆಸೆಫ್ ಕಿನ್ಯ ಸೆಕ್ಟರ್ ಮಟ್ಟದ ಪ್ರತಿಭೋತ್ಸವವು ಇತ್ತೀಚೆಗೆ ಕಿನ್ನ ಬುಖಾರಿ ಜುಮಾ ಮಸೀದಿಯ ಸಭಾಂಗಣದ ಮರ್ಹೂಂ ಕಬೀರ್ ವೇದಿಕೆಯಲ್ಲಿ ನಡೆಯಿತು.
ಎಸೆಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ 5 ಶಾಖೆಗಳನ್ನೊಳಗೊಂಡಂತೆ ಈ ಪ್ರತಿಭೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಾಲ ಡಿವಿಜನ್ ನಾಯಕ ಮುನೀರ್ ಸಖಾಫಿ, ತೌಸೀಫ್ ಸಅದಿ, ಶರೀಫ್ ಸಹದಿ, ಶರೀಫ್ ಮುಡಿಪು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ಬೆಳರಿಂಗೆ ಶಾಖೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೀಂಪ್ರಿ ಶಾಖೆ ರನ್ನರ್ ಪ್ರಶಸ್ತಿ ಪಡೆಯಿತು. ಖುತುಬಿನಗರ ಶಾಖೆಯು ತೃತೀಯ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಚಯರ್‌ಮೆನ್ ಸೈಯದ್ ಅಲವಿ ತಂಙಳ್ ವಹಿಸಿದ್ದರು. ಸೈಯದ್ ಆಬಿದ್ ತಂಙಳ್ ದುವಾ ನೆರವೇರಿಸಿದರು. ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ ಸುರಿಬೈಲ್ ಉಸ್ತಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆ.ಎಂ.ಸಿದ್ದೀಕ್,ಕೆ.ಎಚ್. ಇಸ್ಮಾಯಿಲ್ ಸಹದಿ, ಕೆ.ಎಂ. ಮುಸ್ತಫ ನಈಮಿ, ಶರೀಫ್ ಬಾಖವಿ, ಶೌಕತ್ ಸಖಾಫಿ, ಶರೀಫ್ ಸಅದಿ, ಸೈಯದ್ ತ್ವಾಹಾ ತಂಙಳ್, ಅಬ್ಬಾಸ್ ನಾಟೆಕಲ್, ಇರ್ಫಾನ್ ನೂರಾನಿ, ಹಮೀದ್ ಕಿನ್ಯ, ಸಿಧ್ಧೀಕ್ ಕಲ್ಲಾಂಡ, ಮುಹಮ್ಮದ್ ಉಸ್ತಾದ್, ಉಮರ್ ಝುಹ್ರಿ, ಮುಹಮ್ಮದ್ ಉಳ್ಳಾಲ್, ಇಸ್ಮಾಯಿಲ್ ಮೀಂಪ್ರಿ, ಕೆ.ಎಚ್. ಮೂಸಕುಂಞಿ,ಅಬ್ಬಾಸ್ ಬದ್ರಿಯ ನಗರ, ಕತರ್ ಮೂಸ, ಹಮೀದ್ ಮೀಂಪ್ರಿ, ಸತ್ತಾರ್ ಮೀಪ್ರಿ, ಅಶ್ರಫ್ ಐ.ಎಂ.ಮಜೀದ್, ಕೆ.ಸಿ.ಎಫ್.ಮೀಂಪ್ರಿ, ಇಲ್ಯಾಸ್ ಮದನಿ ಉಪಸ್ಥಿತರಿದ್ದರು.
ಕಿನ್ಯ ಸೆಕ್ಟರ್ ಉಸ್ತುವಾರಿ ಜಿ.ಐ.ಇಬ್ರಾಹೀಂರನ್ನು ಸನ್ಮಾನಿಸಲಾಯಿತು. ಮೆಹಬೂಬ್ ಸಖಾಫಿ ಕಿನ್ಯ ಸ್ವಾಗತಿಸಿದರು.







