ಕಾರು - ಬೈಕ್ ಢಿಕ್ಕಿ : ಇಬ್ಬರು ಮೃತ್ಯು

ಬಾಗೇಪಲ್ಲಿ,ಡಿ.21; ತಾಲೂಕಿನ ಶಂಕಂವಾರಿಪಲ್ಲಿ ಕ್ರಾಸ್‍ನಲ್ಲಿ ಇನೋವಾ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಮಾಣಿಸುತ್ತಿದ್ದ ಬಾಲಾಜಿ(20) ಮತ್ತು ಗಂಗರಾಜು(18) ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತರು ಸೋಮನಾಥಪುರ ಗ್ರಾ.ಪಂ. ವ್ಯಾಪ್ತಿಯ ದೇವಾರ್ಲಪಲ್ಲಿ ಗ್ರಾಮದ ನಿವಾಸಿಗಳಾಗಿದ್ದು, ಕಾರ್ಯ ನಿಮಿತ್ತ ಬಾಗೇಪಲ್ಲಿ ಪಟ್ಟಣಕ್ಕೆ ಬಂದು ವಾಪಸ್ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Next Story





