ಡಿ.24ರಂದು ಕೆಳಾರ್ಕಳಬೆಟ್ಟು ಯಕ್ಷಗಾನ ಕಲಾ ಸಂಘದ ದಶಮಾನೋತ್ಸವ
ಉಡುಪಿ, ಡಿ.21: ಕೆಳಾರ್ಕಳಬೆಟ್ಟು ಶ್ರೀವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘದ ದಶಮಾನೋತ್ಸವದ ಅಂಗವಾಗಿ ಅಭಿನಂದನೆ, ಸನ್ಮಾನ ಹಾಗೂ ಯಕ್ಷ ಗಾನ ಪ್ರದರ್ಶನ ಕಾರ್ಯಕ್ರಮವನ್ನು ಡಿ.24ರಂದು ಕೆಳಾರ್ಕಳಬೆಟ್ಟು ಶ್ರೀದೇವಿ ಭೂದೇವಿ ಸಹಿತ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8ಗಂಟೆಗೆ ವೇದಮೂರ್ತಿ ಮುರಳೀಧರ ತಂತ್ರಿಯವರ ನೇತೃತ್ವದಲ್ಲಿ ಸಾರ್ವಜನಿಕ ಚಂಡಕಾಯಾಗ ಮತ್ತು ಮಧ್ಯಾಹ್ನ 1ಗಂಟೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 7ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮ ವನ್ನು ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ 10 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಗುರು ಬಡಾನಿಡಿಯೂರು ಕೇಶವ ರಾವ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.
ಬೆಳಗ್ಗೆ 11:30ಕ್ಕೆ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದಿಂದ ‘ಶ್ಯಮಂತಕ ರತ್ನ’, ಮಧ್ಯಾಹ್ನ 1:30ಕ್ಕೆ ಕುಂಜಾರುಗಿರಿ ಗಿರಿ ಬಳಗದಿಂದ ‘ಶ್ರೀಕೃಷ್ಣ ಲೀಲೆ’, ಸಂಜೆ 5ಗಂಟೆಗೆ ಬಾಲ ಕಲಾವಿದರಿಂದ ಮಾಯಾಪುರಿ, ರಾತ್ರಿ 9:30ಕ್ಕೆ ಸಂಘದ ಸದಸ್ಯರಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಜರಗಲಿದೆ.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಭಟ್ ಕೊಡವೂರು, ಸಂಘದ ಅಧ್ಯಕ್ಷ ಶೇಷರಾಜ್ ರಾವ್, ಕಾರ್ಯದರ್ಶಿ ಎಸ್. ಜಯರಾಮಯ್ಯ, ಕೋಶಾಧಿಕಾರಿ ಎಂ.ಕೆ.ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು.







