ಡಿ.22: ಗ್ಯಾಸ್ ಪೈಪ್‌ಲೇನ್ ಭೂಸ್ವಾಧೀನ ಕುರಿತು ಸಭೆ
ಮಂಗಳೂರು, ಡಿ.21: ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪನಿಯಾದ ಗೇಲ್ (ಇಂಡಿಯಾ) ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರುವರೆಗೆ ಗೇಲ್ ಗ್ಯಾಸ್ ಪೈಪ್‌ಲೇನ್ ಅಳವಡಿಸುವ ಕುರಿತು ಮಂಗಳೂರು ತಾಲೂಕಿನ ಮಳವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡ್ಡೂರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮಗಳ ಮೂಲಕ ಹಾದು ಹೋಗುವ ಗ್ಯಾಸ್ ಪೈಪ್ ಲೈನ್‌ನ ಭೂ ಉಪಯೋಗದ ಹಕ್ಕು ಸ್ವಾಧೀನತೆ ಕುರಿತು ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಸಂಬಂಧಿಸಿದ ಭೂಮಾಲಕರ ಸಭೆಯನ್ನು ಡಿ.22ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ಪುರಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





