‘2ಜಿ ಹಗರಣ’ ಎಂದವರು ಸ್ಪಷ್ಟನೆ ನೀಡಲಿ: ಶಿವಸೇನೆ

ಮುಂಬೈ, ಡಿ. 21: 2ಜಿ ತರಂಗ ಗುಚ್ಛ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಹೇಳಲು ಕಾರಣವೇನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಗುರುವಾರ ಹೇಳಿದೆ. 2ಜಿ ತರಂಗ ಗುಚ್ಛ ಹಂಚಿಕೆಯಲ್ಲಿ ಯಾವುದೇ ಹಗರಣ ನಡೆಯಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
2ಜಿ ತರಂಗ ಗುಚ್ಛ ಹಂಚಿಕೆ ಹಗರಣ ಎಂದು ಹೇಳಿದ ಬಿಜೆಪಿ ಇಂದು ದೇಶದ ಆಡಳಿತ ನಡೆಸುತ್ತಿದೆ. ಆದುದರಿಂದ ಅದು ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.
Next Story





