Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೆಲವರು ಆಯ್ದ ಅಂಶಗಳನ್ನು ಸೇರಿಸಿ 2ಜಿ...

ಕೆಲವರು ಆಯ್ದ ಅಂಶಗಳನ್ನು ಸೇರಿಸಿ 2ಜಿ ಹಗರಣ ಸೃಷ್ಟಿ ಮಾಡಿದ್ದಾರೆ: ನ್ಯಾಯಾಧೀಶ ಸೈನಿ

ವಾರ್ತಾಭಾರತಿವಾರ್ತಾಭಾರತಿ21 Dec 2017 9:11 PM IST
share
ಕೆಲವರು ಆಯ್ದ ಅಂಶಗಳನ್ನು ಸೇರಿಸಿ 2ಜಿ ಹಗರಣ ಸೃಷ್ಟಿ ಮಾಡಿದ್ದಾರೆ: ನ್ಯಾಯಾಧೀಶ ಸೈನಿ

ಹೊಸದಿಲ್ಲಿ, ಡಿ.21: ಸಾಕ್ಷಿ ಕೊರತೆಯ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ಒಪಿ ಸೈನಿ 2ಜಿ ಹಗರಣದ ಆರೋಪಿಗಳಾದ ಮಾಜಿ ದೂರಸಂಪರ್ಕ ಸಚಿವ ಎ ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಪುತ್ರಿ ಕನಿಮೊಳಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಈ ಹಗರಣವನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿದ ಸಿಬಿಐಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ಉತ್ತಮವಾಗಿ ತಯಾರಿಸಲ್ಪಟ್ಟಿದ್ದ ದೋಷಾರೋಪ ಪಟ್ಟಿಯಲ್ಲಿದ್ದ ಆರೋಪಿಗಳ ಪೈಕಿ ಒಬ್ಬರನ್ನೂ ದೋಷಿಗಳೆಂದು ಸಾಬೀತುಪಡಿಸುವಲ್ಲಿ ಸರಕಾರಿ ವಕೀಲರು ದಯನೀಯವಾಗಿ ವಿಫಲವಾಗಿದ್ದಾರೆ ಎಂದು ನಾನು ಯಾವುದೇ ಅಳುಕಿಲ್ಲದೆ ಹೇಳುತ್ತೇನೆ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸುವ ವೇಳೆ ತಿಳಿಸಿದರು.

ಆರೋಪಿಗಳು ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಅಪರಾಧವನ್ನು ಸಾಬೀತುಪಡಿಸಲು ನ್ಯಾಯಾಲಯಕ್ಕೆ ಒದಗಿಸಲಾಗಿರುವ ದಾಖಲೆಗಳಲ್ಲಿ ಯಾವುದೇ ಸಾಕ್ಷಿ ಸಿಗುವುದಿಲ್ಲ. ಈ ಪ್ರಕರಣದಲ್ಲಿ ತಯಾರಿಸಲಾಗಿರುವ ದೋಷಾರೋಪ ಪಟ್ಟಿಯನ್ನು ದಾಖಲೆಗಳ ತಪ್ಪು ಅರ್ಥೈಸುವಿಕೆ, ಅರ್ಥಮಾಡಿಕೊಳ್ಳದೆ ಇರುವುದು ಮತ್ತು ವಿಷಯದ ಹೊರಗಿನ ಅಂಶಗಳನ್ನು ಆಧಾರಿಸಿ ತಯಾರಿಸಲಾಗಿದೆ ಎಂದು ಹೇಳಿರುವ ನ್ಯಾಯಾಧೀಶರು, ವಿತ್ತ ಕಾರ್ಯದರ್ಶಿ ಪ್ರವೇಶ ಶುಲ್ಕವನ್ನು ಪರಿಷ್ಕರಿಸುವ ಸಲಹೆ ನೀಡಿರುವುದು, ಎ ರಾಜಾ ಕೆಲವು ಅಂಶಗಳನ್ನು ಅಳಿಸಿ ಹಾಕಿರುವುದು ಹೀಗೆ ದೋಷಾರೋಪಪಟ್ಟಿಯಲ್ಲಿ ದಾಖಲಾಗಿರುವ ಹಲವು ಅಂಶಗಳು ವಾಸ್ತವದಲ್ಲಿ ತಪ್ಪಾಗಿದೆ ಎಂದು ತಿಳಿಸಿದ್ದಾರೆ.

ಎ ರಾಜಾ ಈ ಪ್ರಕರಣದ ಪಿತೂರಿ ನಡೆಸಿದ್ದರು ಎಂಬುದಕ್ಕೆ ನೀಡಲಾಗಿರುವ ದಾಖಲೆಯಲ್ಲಿ ಯಾವುದೇ ಬಲವಿಲ್ಲ. ಅವರು ಈ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ, ಪಿತೂರಿ ನಡೆಸಿದ್ದಾರೆ ಅಥವಾ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಕೆಲವರು ಆಯ್ದ ಕೆಲವು ಅಂಶಗಳನ್ನು ಸೇರಿಸಿ ಈ ಹಗರಣವನ್ನು ಸೃಷ್ಠಿ ಮಾಡಿದ್ದಾರೆ ಎಂದು ಹೇಳಿರುವ ನ್ಯಾಯಾಧೀಶರು, ಬೇಸಿಗೆ ರಜೆಯನ್ನೂ ಸೇರಿಸಿ ಕಳೆದ ಏಳು ವರ್ಷಗಳಲ್ಲಿ ಎಲ್ಲಾ ದಿನಗಳಲ್ಲೂ ನಾನು ನ್ಯಾಯಾಲಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಕುಳಿತು ಈ ಪ್ರಕರಣದಲ್ಲಿ ಯಾವುದಾದರೂ ಕಾನೂನಾತ್ಮಕವಾಗಿ ಸರಿಯಾಗಿರಬಹುದಾದ ಸಾಕ್ಷಿಯನ್ನು ಯಾರಾದರೂ ಹಾಜರುಪಡಿಸುತ್ತಾರೆಯೇ ಎಂದು ಕಾಯುತ್ತಿದ್ದೆ. ಆದರೆ ಯಾರು ಕೂಡಾ ಒಂದು ಸಾಕ್ಷಿಯನ್ನೂ ತರಲಿಲ್ಲ. ಅದರರ್ಥ ಏನೆಂದರೆ ಎಲ್ಲರು ಕೂಡಾ ವದಂತಿಗಳು, ಊಹೆಗಳು ಸೃಷ್ಟಿಸಿದ ಸಾರ್ವಜನಿಕ ದೃಷ್ಟಿಕೋನವನ್ನೇ ನಂಬಿ ಹೇಳಿಕೆ ನೀಡುತ್ತಿದ್ದರು. ಆದರೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಊಹೆಗಳಿಗೆ ಯಾವುದೇ ಜಾಗವಿಲ್ಲ ಎಂದು ನ್ಯಾಯಾಧೀಶರಾದ ಒಪಿ ಸೈನಿ ತಿಳಿಸಿದ್ದಾರೆ.

ಏನಿದು 2ಜಿ ಹಗರಣ....?

ಹೊಸದಿಲ್ಲಿ,ಡಿ.21: ಹಗರಣವು 2007-08ರಲ್ಲಿ ನಡೆದಿದ್ದ 2ಜಿ ತರಂಗಗುಚ್ಛಗಳ ಹಂಚಿಕೆಗೆ ಸಂಬಂಧಿಸಿದ್ದು, ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ.ಗಳ ನಷ್ಟವುಂಟಾಗಿದೆ ಎಂದು ಆಗಿನ ಮಹಾ ಲೇಖಪಾಲ(ಸಿಎಜಿ) ವಿನೋದ ರಾಯ್ ಅವರು 2010ರಲ್ಲಿ ಸರಕಾರಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಹೇಳಿದ್ದರು.

ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರ ಯುಪಿಎ ಸರಕಾರದ ಎರಡನೇ ಅಧಿಕಾರಾವಧಿಯಲ್ಲಿ ಈ ಹಗರಣ ಬೆಳಕಿಗೆ ಬಂದಾಗ ಡಿಎಂಕೆ ನಾಯಕ ಎ.ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದರು. ಇದು ಯುಪಿಎ ಸರಕಾರದ ಆಡಳಿತಾವಧಿ ಯಲ್ಲಿ ಬೆಳಕಿಗೆ ಬಂದಿದ್ದ ಬೃಹತ್ ಭ್ರಷ್ಟಾಚಾರ ಹಗರಣಗಳಲ್ಲೊಂದು ಎಂಬ ಕುಖ್ಯಾತಿಗೀಡಾಗಿತ್ತು.

ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಸದೆ ತರಂಗಗುಚ್ಛಗಳನ್ನು ತಪ್ಪುದಾರಿಯಲ್ಲಿ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು 2012ರಲ್ಲಿ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು, ರಾಜಾ ಅವರು ಮೊಬೈಲ್ ದೂರಸಂಪರ್ಕ ಕಂಪನಿಗಳಿಗೆ ಹಂಚಿಕೆ ಮಾಡಿದ್ದ 122 ಪರವಾನಿಗೆಗಳನ್ನು ರದ್ದುಗೊಳಿಸಿತ್ತು.

ಯುನಿಟೆಕ್ ವೈರ್‌ಲೆಸ್, ಸ್ವಾನ್ ಟೆಲಿಕಾಮ್, ರಿಲಯನ್ಸ್ ಟೆಲಿಕಾಮ್, ಲೂಪ್ ಟೆಲಿಕಾಮ್, ಲೂಪ್ ಮೊಬೈಲ್ ಇಂಡಿಯಾ, ಎಸ್ಸಾರ್ ಟೆಲಿ ಹೋಲ್ಡಿಂಗ್ ಮತ್ತು ಎಸ್ಸಾರ್ ಗ್ರೂಪ್ ಆರೋಪಿ ಕಂಪನಿಗಳಾಗಿದ್ದವು.

ಹಗರಣದ ತನಿಖೆ ನಡೆಸಿದ್ದ ಸಿಬಿಐ ರಾಜಾ ಅವರನ್ನು 2011ರಲ್ಲಿ ಬಂಧಿಸಿದ್ದು, ಜಾಮೀನು ಪಡೆಯುವ ಮುನ್ನ ಸುಮಾರು ಒಂದು ವರ್ಷ ಜೈಲಿನಲ್ಲಿ ಕಳೆದಿದ್ದರು.

ರಾಜಾ ಮತ್ತು ಡಿಎಂಕೆಯ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರೊಂದಿಗೆ ಭಾರತದ ಕೆಲವು ಅತ್ಯುತ್ತಮ ಟೆಲಿಕಾಮ್ ಕಂಪನಿಗಳ ಪ್ರವರ್ತಕರು ಮತ್ತು ಹಿರಿಯ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಇತರರೊಂದಿಗೆ ಕನಿಮೋಳಿ ಕೂಡ ಜೈಲುವಾಸ ಅನುಭವಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X