ಹತ್ಯೆಯಾದ ರಿಯಾಝ್ ಮುಸ್ಲಿಯಾರ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಮುಸ್ಲಿಂ ಲೀಗ್

ಮಡಿಕೇರಿ, ಡಿ.21: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಸರಗೋಡಿನ ಚೂರಿ ಜುಮಾ ಮಸೀದಿಯಲ್ಲಿ ಉಸ್ತಾದರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಯಾಝ್ ಮುಸ್ಲಿಯಾರ್ ಅವರ ಕುಟುಂಬಕ್ಕೆ ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್‍ನ ಕಾಸರಗೋಡು ಜಿಲ್ಲಾ ಸಮಿತಿ 37 ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ.
“ಕಾರುಣ್ಯ ಭವನ” ಹೆಸರಿನ ಈ ಮನೆಯ ಕೀಲಿಕೈಯನ್ನು ರಿಯಾಝ್ ಮುಸ್ಲಿಯಾರ್ ಅವರ ಕುಟುಂಬಕ್ಕೆ ಇಂದು ಹಸ್ತಾಂತರಿಸಲಾಯಿತು.
ಹೊದವಾಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಪಿ.ಬಿ. ಅಬ್ದುರ್ರಝಾಕ್, ಎನ್.ಎ. ನೆಲ್ಲಿಕುನ್ನು, ಚೆರ್ಕಳ ಅಬ್ದುಲ್ಲಾ, ಮಾಜಿ ಮಂತ್ರಿಗಳಾದ ಸಿ.ಟಿ. ಅಹ್ಮದ್, ಕೊಡಗು ಜಿಲ್ಲಾ ಖಾಝಿ ಮುಹಮ್ಮದ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಹುಸೈನ್ ಸಖಾಫಿ ಎಮ್ಮೆಮಾಡು, ಸಾದಿಕಲಿ ಫೈಝಿ, ಕೆ.ಎ. ಹ್ಯಾರಿಸ್, ಹಂಝ ಕೊಟ್ಟಮುಡಿ, ಕೆ.ಎ.ಯೂಸುಫ್, ಕೆ.ಎಸ್.ಅಮು ಹಾಜಿ, ಎಂ.ಎ.ಮನ್ಸೂರ್ ಅಲಿ ಮೊದಲಾದವರು ಉಪಸ್ಥಿತರಿದ್ದರು.





