‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ’ಯಾಗಿ ಸಿಎಂ ಸಿದ್ದರಾಮಯ್ಯ, ನಟ ಪ್ರಕಾಶ್ ರೈ ಆಯ್ಕೆ

ಬೆಂಗಳೂರು, ಡಿ.21: ಬೆಂಗಳೂರು ಪ್ರೆಸ್ ಕ್ಲಬ್ ಪ್ರತಿ ವರ್ಷ ನೀಡುತ್ತಿರುವ ‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ನಟ, ನಿರ್ದೇಶಕ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 21ರಂದು ನಡೆದ ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 31ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರನ್ನು “ಶತಮಾನದ ಶ್ರೀಗಳು” ಎಂದು ಪ್ರೆಸ್ ಕ್ಲಬ್ ವತಿಯಿಂದ ಅಭಿನಂದಿಸಲಾಗುವುದು. ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ “ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ.
“ಪ್ರೆಸ್‍ಕ್ಲಬ್ ವಾರ್ಷಿಕ ಪ್ರಶಸ್ತಿ”ಗೆ ಆಯ್ಕೆಯಾದ ಪತ್ರಕರ್ತರು
1.ಡಾ.ಎ ಸೂರ್ಯ ಪ್ರಕಾಶ್, ಅಧ್ಯಕ್ಷರು, ಪ್ರಸಾರ ಭಾರತಿ ಮಂಡಳಿ.
2.ರಾಜಾ ಶೈಲೇಶ್ ಚಂದ್ರಗುಪ್ತ, ಹಿರಿಯ ಪತ್ರಕರ್ತರು.
3.ಅರೆಕೆರೆ ಜಯರಾಮ್, ಹಿರಿಯ ಪತ್ರಕರ್ತರು.
4.ಬಿ.ವಿ. ಮಲ್ಲಿಕಾರ್ಜುನಯ್ಯ, ಹಿರಿಯ ಪತ್ರಕರ್ತರು.
5. ಸುಗತ ಶ್ರೀನಿವಾಸ ರಾಜು, ಮುಖ್ಯಸ್ಥರು, ದಿ. ಸ್ಟೇಟ್ಸ್ ಮನ್.
6.ಈಶ್ವರ್ ದೈತೋಟ, ಹಿರಿಯ ಪತ್ರಕರ್ತರು.
7.ಎಚ್.ಆರ್. ರಂಗನಾಥ್, ಮುಖ್ಯಸ್ಥರು, ಪಬ್ಲಿಕ್ ಟಿವಿ.
8.ಆಯಿಷಾ ಖಾನಮ್, ದಕ್ಷಿಣ ಭಾರತದ ಡಿಡಿ ನ್ಯೂಸ್ ಪ್ರತಿನಿಧಿ.
9.ಕೆ. ವೆಂಕಟೇಶ್, ಹಿರಿಯ ಛಾಯಾಗ್ರಾಹಕರು.
10. ವಿ.ರಾಮಸ್ವಾಮಿ ಕಣ್ವ, ಪತ್ರಕರ್ತರು.
11. ಮಂಜನಾಥ್ ಅದ್ದೆ, ಪತ್ರಕರ್ತರು.







