ಡಿ.24; ಅಂತರ್ ಜಿಲ್ಲಾ ಮುಕ್ತ ಪುರುಷರ ಕಬಡ್ಡಿ ಪಂದ್ಯಾಟ
ಪುತ್ತೂರು, ಡಿ. 21: ಪಡ್ಡಾಯೂರಿನ ‘ಓಂ ಫ್ರೆಂಡ್ಸ್’ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ತಾಲ್ಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಹಿಂದೂ ಬಾಂಧವರಿಗಾಗಿ ಅಂತರ್‌ಜಿಲ್ಲಾ ಮುಕ್ತ ಪುರುಷರ ಕಬಡ್ಡಿ ಪಂದ್ಯಾಟ 'ಓಂ ಟ್ರೋಪಿ’ ಡಿ.24ರಂದು ನಡೆಯಲಿದೆ ಎಂದು
ಸಂಸ್ಥೆಯ ಗೌರವಾಧ್ಯಕ್ಷ ಗಿರೀಶ್ ಪಡ್ಡಾಯೂರು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಡ್ಡಾಯೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 24ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ ಸಿಂಚನ ಗೌಡ ಅವರು ಕಬಡ್ಡಿ ಪಂದ್ಯಾಟ ಉದ್ಘಾಟಿಸುವರು. ಮಂಗಳೂರು ವಿವಿ ಶಟಲ್ ಬ್ಯಾಡ್ಮಿಂಟನ್ ತಂಡದ ನಾಯಕ ವರುಣ್ ಮುವಪ್ಪು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಳಿಕ 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಬಿಜೆಪಿ ನಾಯಕರ ಕೂಡುವಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಗರ ಮಂಡಲ ಬಿಜೆಪಿ ಅಧ್ಯಲ್ಷ ಜೀವಂಧರ ಜೈನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪ್ರಮುಖರಾದ ರಾಮದಾಸ್ ಹಾರಾಡಿ, ಕೇಶವ ಬಜತ್ತೂರು, ನವೀನ್ ಪಡ್ನೂರು, ಸಹಜ್ ರೈ ಬಳಜ್ಜ, ಲಕ್ಷ್ಮಣ ಬೆಳ್ಳಿಪ್ಪಾಡಿ, ಶಿವರಂಜನ್, ರಾಜೇಶ್ ಬನ್ನೂರು, ಸೋಮಪ್ಪ ಸಫಲ್ಯ, ವಿಶ್ವನಾಥ ಗೌಡ, ಗೌರಿ ಬನ್ನೂರು, ವಿನಯ ಭಂಡಾರಿ, ಯಶೋಧಾ ಹರೀಶ್, ಸುನಿಲ್ ದಡ್ಡು ಅವರು ಭಾಗವಹಿಸುವರು ಎಂದರು.
ಸಂಜೆ ಏಳು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಒಡಿಯೂರು ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಡಾ.ಎಂ.ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಸಹನಾ ಕುಂದರ್ ಅವರು ದಿಕ್ಸೂಚಿ ಭಾಷಣ ಮಾಡುವರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳಾದ ವಿಜಯ ಕಾಂಚನ್, ಲಹರಿ ಕೋಟ್ಯಾನ್, ಚಂದ್ರಶೇಖರ್ ಹೆಗ್ಡೆ, ಅನಘಾ, ವಜ್ರ ತೇಜಸ್, ಈಶ್ವರ ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ರಾತ್ರಿ ಮಂಗಳೂರಿನ ಚಾಪರ್ಕ ಕಲಾವಿದರಿಂದ ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ, ನಟಿಸಿರುವ ‘ಕೊಡೆ ಬುಡುಪಾಲೆ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದವರು ತಿಳಿಸಿದರು.







