ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಎತ್ತಿದ ಪಾಕ್

ವಿಶ್ವಸಂಸ್ಥೆ, ಡಿ. 21: ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ. ಕಾಶ್ಮೀರವನ್ನು ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಹೋಲಿಸಿದ ಅದು, ಈ ‘ಅನಾಹುತಕಾರಿ’ ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಜಗತ್ತು ಸುಮ್ಮನೆ ನೋಡುತ್ತಾ ಕುಳಿತಿದೆ ಎಂದಿದೆ.
ಭದ್ರತಾ ಮಂಡಳಿಯಲ್ಲಿ ಬುಧವಾರ ನಡೆದ ಮುಕ್ತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಲೀಹಾ ಲೋಧಿ, ವಿಶ್ವ ವ್ಯವಸ್ಥೆಯ ಪಂಚಾಂಗ ಕುಸಿಯುತ್ತಿರುವ ಸಮಯದಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಎದುರಾಗಿರುವ ಸವಾಲುಗಳು ತೀವ್ರಗೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.
‘‘ಪ್ಯಾಲೆಸ್ತೀನ್ ಮತ್ತು ಕಾಶ್ಮೀರದ ಜನರ ಮಾನವಹಕ್ಕುಗಳು ಆಕ್ರಮಣಕಾರಿ ಶಕ್ತಿಗಳ ಕೈಯಲ್ಲಿ ನಿರಂತರವಾಗಿ ದಮನಗೊಳ್ಳುತ್ತಿವೆ. ಈ ಭಯಾನಕ ಪರಿಸ್ಥಿತಿಯನ್ನು ನಿವಾರಿಸುವ ಬದಲು ಜಗತ್ತು ಅದನ್ನು ನೋಡುತ್ತಾ ಕುಳಿತಿದೆ’’ ಎಂದರು.
Next Story





