ಸಿರಿಯ ವಾಯು ದಾಳಿ: 19 ನಾಗರಿಕರ ಸಾವು

ಸಾಂದರ್ಭಿಕ ಚಿತ್ರ
ಡಮಾಸ್ಕಸ್ (ಸಿರಿಯ), ಡಿ. 21: ವಾಯುವ್ಯ ಸಿರಿಯದ ಪಟ್ಟಣವೊಂದರ ಮೇಲೆ ನಡೆದ ವಾಯುದಾಳಿಯಲ್ಲಿ 9 ಮಕ್ಕಳು ಸೇರಿದಂತೆ 19 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
‘‘ಶಂಕಿತ ರಶ್ಯನ್ ಯುದ್ಧ ವಿಮಾನಗಳು ಬಂಡುಕೋರರ ವಶದಲ್ಲಿರುವ ಮಾರ್ಶುರಿನ್ ನಗರದಲ್ಲಿರುವ ಹಲವಾರು ಮನೆಗಳ ಮೇಲೆ ದಾಳಿ ನಡೆಸಿದವು’’ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ತಿಳಿಸಿದರು.
ಈ ದಾಳಿಗಳಲ್ಲಿ ಒಂದೇ ಕುಟುಂಬದ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
Next Story





