ಡಿ.22: ಜಮೀಯತೆ ಅಹ್ಲೆ ಹದೀಸ್ ವತಿಯಿಂದ ವಿಚಾರಗೋಷ್ಠಿ
ಮಂಗಳೂರು, ಡಿ.21: ಜಮೀಯತೆ ಅಹ್ಲೆ ಹದೀಸ್ ವತಿಯಿಂದ ಡಿ.22ರಂದು ಸಂಜೆ 4:30ಕ್ಕೆ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಶೇಖ್ ಸ್ವಾಲಿಹ್ ಅಲ್ ಫೌಝಾನ್ ಅವರ ಅರೆಬಿಕ್ ಕೃತಿ ‘ಉಜೂಬ್ ತಸ್‌ಬಿತ್‌ಮಿನಲ್ ಅಖ್‌ಬಾರ್ ವಹ್ತೆರಾಂ ಅಲ್ ಉಲಮಾ’ (ಸುದ್ದಿ ದೃಢೀಕರಣದ ಹೊಣೆಗಾರಿಕೆ ಮತ್ತು ಉಲಮಾಗಳಿಗೆ ಗೌರವ) ಎಂಬ ವಿಷಯದಲ್ಲಿ ಉರ್ದು ಭಾಷೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಶೇಖ್ ಝಫರುಲ್ ಹಸನ್ ಮದನಿ ಅವರು ಉರ್ದುವಿನಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





