ಪ್ರೀತಿ, ಶಾಂತಿ ಹಂಚುವ ಕ್ರಿಸ್‌ಮಸ್ : ಐವನ್ ಡಿಸೋಜ

ಬೆಂಗಳೂರು, ಡಿ.22: ಕ್ರಿಸ್‌ಮಸ್ ಆಚರಣೆಯಿಂದ ಪರಸ್ಪರ ಪ್ರೀತಿ, ಶಾಂತಿ ಹಂಚಲು ಸಾಧ್ಯ ಎಂದು ಕರ್ನಾಟಕ ಸರಕಾರ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚರ್ಚ್‌ಗಳ ಸಹಯೋಗದಲ್ಲಿ ವಿ.ನಾಗೇನಹಳ್ಳಿಯಲ್ಲಿ ನಡೆದ ಕ್ರಿಸ್‌ಮಸ್ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದ್ವೇಷ, ಗಲಭೆಗಳಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ, ಪರಸ್ಪರ ಪ್ರೀತಿ ಹಂಚುವ ಮೂಲಕ ಶಾಂತಿ ಸೌಹಾರ್ದತೆಯನ್ನು ಉಳಿಸಬಹುದು. ಇಂತಹ ಶಾಂತಿ ಸಂಕೇತವನ್ನು ಕ್ರಿಸ್‌ಮಸ್ ಆಚರಣೆಯಿಂದ ಎಲ್ಲೆಡೆ ಪಸರಿಸಬಹದು ಎಂದು ನುಡಿದರು.
ಏಸು ಒಬ್ಬರು ಶಾಂತಿಯ ರಾಯಭಾರಿಯಾಗಿದ್ದು. ದೇಶದ ನೆಲ, ಜಲ, ಕಾನೂನನ್ನು ಪ್ರೀತಿಸುವುದು ಕಲಿಯಬೇಕು. ಆಗ ಮಾತ್ರ ಒಳ್ಳೆ ದೇಶ ಕಟ್ಟಬಹುದು, ಅಂತಹ ಪ್ರಯತ್ನಗಳು ಕ್ರಿಸ್‌ಮಸ್ ಆಚರಣೆಯಿಂದ ಸಹಕಾರಿ ಆಗಲಿದೆ ಎಂಬುದು ಸಂತಸ ತಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬೈರತಿ ಸುರೇಶ್ ಮಾತನಾಡಿ, ಕ್ರಿಸ್‌ಮಸ್ ಆಚರಣೆಯನ್ನು ಪ್ರೀತಿಯ ಸಂದೇಶದೊಂದಿಗೆ ಆಚರಿಸುತ್ತಿರುವುದು ಸಂತಸ ತಂದಿದ್ದು, ಜನರಲ್ಲಿ ಶಾಂತಿ ಸೌಹರ್ದತೆ, ಒಗ್ಗಟ್ಟಿನ ಬಲ ಪ್ರದರ್ಶನವಾಗಿದೆ ಎಂದು ನುಡಿದರು.
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎಸ್.ಚಿನ್ನಪ್ಪ, ಬಿಬಿಎಂಪಿ ಸದಸ್ಯ ಆನಂದ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜಣ್ಣ, ರಾಜ್‌ಕುಮಾರ್, ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ವಿ.ಬಾಲಾಜಿ ಸೇರಿ ಪ್ರಮುಖರಿದ್ದರು.







