Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ನೀರೆ, ಬೈಲೂರುಗಳಲ್ಲಿ ಸರಕಾರಿ ಜಮೀನಿನ...

‘ನೀರೆ, ಬೈಲೂರುಗಳಲ್ಲಿ ಸರಕಾರಿ ಜಮೀನಿನ ಅತಿಕ್ರಮಣ’

ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ22 Dec 2017 9:09 PM IST
share
‘ನೀರೆ, ಬೈಲೂರುಗಳಲ್ಲಿ ಸರಕಾರಿ ಜಮೀನಿನ ಅತಿಕ್ರಮಣ’

ಮಣಿಪಾಲ, ಡಿ.22: ಕಾರ್ಕಳ ತಾಲೂಕಿನ ನೀರೆ, ಬೈಲೂರು, ಹೆಬ್ರಿ ಮುಂತಾದ ಕಡೆಗಳಲ್ಲಿ ಪಟ್ಟಾ ಜಾಗವನ್ನು ಖರೀದಿಸಿ ಅದರಲ್ಲಿ ರಬ್ಬರ್ ಹಾಗೂ ಅನಾನಸು ಬೆಳೆಗಳನ್ನು ಬೆಳೆಸುತ್ತಾ, ಅಕ್ಕಪಕ್ಕದ ಸರಕಾರಿ ಜಾಗವನ್ನು ಅತಿಕ್ರಮಿಸುವ ವ್ಯವಸ್ಥಿತ ಪ್ರಯತ್ನಗಳಾಗುತ್ತಿದೆ. ಇವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಸದಸ್ಯರು ಇಂದು ನಡೆದ ಉಡುಪಿ ಜಿಪಂನ 10ನೇ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಜಿಪಂ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬೈಲೂರು ಜಿಪಂ ಕ್ಷೇತ್ರದ ಸದಸ್ಯ ಸುಮಿತ್ ಶೆಟ್ಚಿ, ಈ ಬಗ್ಗೆ ಮಾಹಿತಿ ನೀಡುವಂತೆ ತಹಶೀಲ್ದಾರ್‌ರನ್ನು ಕೇಳಿದ್ದರೂ, ಅವರಿಂದ ಇದುವರೆಗೆ ಯಾವುದೇ ವಿವರಗಳನ್ನು ಬಂದಿಲ್ಲ ಎಂದರು.

ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕಾರ್ಕಳ ತಹಶೀಲ್ದಾರ್‌ರು ಈ ಬಗ್ಗೆ ಪರಿಶೀಲಿಸಿ ಪಟ್ಟಾ ಜಾಗ ಖರೀದಿಸಿ ಅದರ ಸಮೀಪದಲ್ಲಿರುವ ಸರಕಾರಿ ಜಮೀನಿನ ಒತ್ತುವರಿ ಬಗ್ಗೆ ಪರಿಶೀಲಿಸಿ ವರದಿ ನೀಡಲು ಕಂದಾಯ ನಿರೀಕ್ಷಕರಿಗೆ ತಿಳಿಸಲಾಗಿದ್ದು, ಅವರು ಇಂಥ ಯಾವುದೇ ಅತಿಕ್ರಮಣ ಕಂಡುಬಂದಿಲ್ಲ ಎಂದು ವರದಿ ನೀಡಿದ್ದಾರೆ ಎಂದರು.

ಇದರಿಂದ ಇನ್ನಷ್ಟು ಆಕ್ರೋಶಿತರಾದ ಸದಸ್ಯರು, ತನ್ನ ಕ್ಷೇತ್ರದ ನೀರೆ ಹಾಗೂ ಬೈಲೂರು ಗ್ರಾಮಗಳಲ್ಲಿ ಅತಿಕ್ರಮಣ ನಡೆದಿರುವುದನ್ನು ನಾನು ದಾಖಲೆ ಯೊಂದಿಗೆ ತೋರಿಸಬಲ್ಲೆ. ಅಲ್ಲಿ ದುಡ್ಡಿನ ಬಲ ಇರುವವರು ಎಕರೆಗಟ್ಟಲೆ ಜಾಗವನ್ನು ಅತಿಕ್ರಮಿಸಿಕೊಂಡರೂ ಕಣ್ಣು ಮುಚ್ಚಿ ಕುಳಿತುಕೊಳ್ಳುವ ಅಧಿಕಾರಿಗಳು, ನಿವೇಶನ ಇಲ್ಲದ ಬಡವನೊಬ್ಬನಿಗೆ ಐದು ಸೆನ್ಸ್ ಜಾಗ ನೀಡಲು ನೂರೆಂಟು ಅಡೆತಡೆಗಳನ್ನು ಮಂದೊಡ್ಡುತ್ತಾರೆ ಎಂದು ಆರೋಪಿಸಿದರು.

ಈ ಬಗ್ಗೆ ಒಂದು ವಾರದೊಳಗೆ ತಾವು ತನಿಖೆ ನಡೆಸಿ ವರದಿ ನೀಡುವುದಾಗಿ ತಹಶೀಲ್ದಾರರು ಸುಮಿತ್ ಶೆಟ್ಟಿ ಅವರಿಗೆ ಭರವಸೆ ನೀಡಿದರು.

ಹೆಬ್ರಿ ತಾಲೂಕು ಬೇಕೇಬೇಕು: ಹೆಬ್ರಿಯ ಜನರ ಬಹುಕಾಲದ ಕನಸಾದ ಹೆಬ್ರಿ ತಾಲೂಕು ಘೋಷಣೆಯನ್ನು ಸರಕಾರ ಮಾಡಿದ್ದರೂ, ಇದೀಗ ತಾಲೂಕು ರಚನೆಗೆ ಬದಲಾದ ಮಾನದಂಡದಂತೆ ಅದು ಅಸಾಧ್ಯ ಎಂಬ ಬಗ್ಗೆ ಪತ್ರಿಕಾ ವರದಿಗಳು ಬಂದಿದೆ. ಈ ಬಗ್ಗೆ ತಮಗೆ ಸ್ಪಷ್ಟನೆ ಬೇಕು ಎಂದು ಸದಸ್ಯೆ ಜ್ಯೋತಿ ಹರೀಶ್ ಹೇಳಿದರು.

ಈಗಿನ ಮಾನದಂಡದಂತೆ ತಾಲೂಕಿಗೆ ಕನಿಷ್ಠ ಒಂದು ಲಕ್ಷ ಜನಸಂಖ್ಯೆ ಹಾಗೂ 56 ಗ್ರಾಮಗಳು ಬೇಕಾಗಿವೆ. ಈ ಪ್ರಸ್ತಾವಿತ ಹೆಬ್ರಿ ತಾಲೂಕಿಗೆ 46,000 ಜನಸಂಖ್ಯೆ ಹಾಗೂ 16 ಗ್ರಾಮ ಮಾತ್ರವಿದೆ. ನಮ್ಮ ಭೌಗೋಳಿಕ ಸನ್ನಿವೇಶವನ್ನು ಪರಿಗಣಿಸಿ ಹೆಬ್ರಿ ತಾಲೂಕು ಆಗಲೇಬೇಕು. ಜ.1ರೊಳಗೆ ಹೆಬ್ರಿಗೆ ವಿಶೇಷ ತಹಶೀಲ್ದಾರ್ ನೇಮಕವಾಗಲೇಬೇಕು ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರು ಉತ್ತರಿಸಿ, ಸರಕಾರ ಹೆಬ್ರಿ ತಾಲೂಕಿನ ಪ್ರಸ್ತಾಪವನ್ನು ಇನ್ನೊಮ್ಮೆ ಕಳುಹಿಸುವಂತೆ ತಿಳಿಸಿದ್ದು, ಅದರಂತೆ ಇಲ್ಲಿನ ಗ್ರಾಮಸಭೆಗಳ ನಿರ್ಣಯ ಹಾಗೂ ಬೌಗೋಳಿಕ ಹಿನ್ನೆಲೆಯಲ್ಲಿ ಸರಕಾರದ ನಿರ್ಧಾರವನ್ನು ಮರುಪರೀಶಿಲಿಸುವಂತೆ ಕೋರಿ ಶಿಫಾರಸ್ಸು ಮಾಡಿ ಕಳುಹಿಸಲಾಗಿದೆ. ಇನ್ನು ಸರಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.

ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಮಂಜೂರಾದ ಬಡ ಫಲಾನುಭವಿಗಳಿಗೆ ಕಳೆದ ಮೂರು ಬಿಲ್‌ಗಳು ಪಾಸಾಗದೇ ಅವರು ತೀರಾ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮನೆಗಳು ನಿರ್ಮಾಣಗೊಳ್ಳದೇ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ನ ಜನಾರ್ದನ ತೋನ್ಸೆ ನುಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಕೆಲವು ತಾಂತ್ರಿಕ ಕಾರಣಗಳಿಂದ ಎರಡು ತಿಂಗಳು ತೊಂದರೆಯಾಗಿದೆ. ಈಗ ನಿಯಮಿತವಾಗಿ ಬಿಲ್‌ಗಳು ಪಾಸಾಗಿ ಬರುತ್ತಿವೆ ಎಂದರು.

ರೇಷ್ಮಾ ಉದಯ ಶೆಟ್ಟಿ ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯ ಬೆಳ್ಮಣ್‌ನಲ್ಲಿ 28 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗ ಯಾವುದೇ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಅಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು. ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಬ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಉತ್ತರಕ್ಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿಜದರು.

ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ಆರಂಭಕ್ಕೆ ಜಿಪಂನ ವಿರೋಧವನ್ನು ನಿರ್ಣಯದ ಮೂಲಕ ಸರಕಾರಕ್ಕೆ ಕಳುಹಿಸಿಕೊಡುವಂತೆ ರೇಷ್ಮಾ ಶೆಟ್ಟಿ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಸದಸ್ಯರ ಪ್ರಶ್ನೆಗೆ ಉತ್ತರಿಸಬೇಕಿದ್ದ ಅಧಿಕಾರಿಗೆ ಕನ್ನಡ ಬಾರದ ವಿಷಯ ಮತ್ತೆ ಸದಸ್ಯರ ಸಿಟ್ಟಿಗೆ ಕಾರಣವಾಯಿತು. ಕೊನೆಗೆ ಮುಂದಿನ ಸಭೆಗೆ ಸ್ಥಳೀಯ ಭಾಷೆಯನ್ನು ತಿಳಿದಿರುವ ಅಧಿಕಾರಿಯನ್ನು ಕಳುಹಿಸುವಂತೆ ಸಿಇಒ ಶಿವಾನಂದ ಕಾಪಸಿ ಅಧಿಕಾರಿಗೆ ಆದೇಶಿಸಬೇಕಾಯಿತು.

94ಸಿಸಿಯಡಿ ಹಕ್ಕುಪತ್ರ ನೀಡುವ ವಿಷಯ, ಡೀಮ್ಡ್ ಪಾರೆಸ್ಟ್ ಸಮಸ್ಯೆ, ನಿವೇಶನ ರಹಿತರ ಪಟ್ಟಿಯನ್ನು ತಹಶೀಲ್ದಾರ್ ಮಾಡಿರುವ ವಿಷಯ, ಕೆಲವು ಅಧಿಕಾರಿಗಳ ಸತತ ಗೈರುಹಾಜರಿ ಕುರಿತು ಇಂದಿನ ಸಭೆಯಲ್ಲಿ ಚರ್ಚೆಗಳು ನಡೆದವು.

ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಸಿಇಓ ಶಿವಾನಂದ ಕಾಪಸಿ, ಸ್ಥಾಯಿ ಸಮಿತಿ ಸದಸ್ಯರಾದ ಕೆ.ಬಾಬು ಶೆಟ್ಟಿ, ಉದಯ ಎಸ್.ಕೋಟ್ಯಾನ್, ಶಶಿಕಾಂತ ಪಡುಬಿದ್ರೆ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಜನಪದ ನೃತ್ಯ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಮಲ್ಪೆಯ ಸರಸ್ವತಿ ಯುವಕ ಮಂಡಲದ ಸದಸ್ಯರನ್ನು ಇಂದು ಜಿಪಂ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೇ 30,000 ರೂ.ಗಳ ಪ್ರೋತ್ಸಾಹಧನದ ಚೆಕ್‌ನ್ನು ಹಸ್ತಾಂತರಿಸಲಾಯಿತು.

 ಅದೇ ರೀತಿ ತಮ್ಮ ಅತ್ಯುತ್ತಮ ಸೇವೆಗಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಪೆರಂಪಳ್ಳಿಯ ಅಂಗನವಾಡಿ ಕಾರ್ಯಕರ್ತೆ ಡೆಲ್ಫಿನ್ ಡಿಸೋಜ ಅವರನ್ನು ಸಹ ಜಿಪಂ ವತಿಯಿಂದ ಸನ್ಮಾನಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X