ಜ.5ರವರೆಗೆ ದಕ್ಷಿಣ ಭಾರತದ ‘ವಿಶ್ವ ವಜ್ರ’ ಪ್ರದರ್ಶನ
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್

ಮಂಗಳೂರು, ಡಿ. 22: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ವತಿಯಿಂದ ಡಿ.22ರಿಂದ ಜ.5ರವರೆಗೆ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಬೃಹತ್ ವಜ್ರಗಳ ಪ್ರದರ್ಶನ ‘ವಿಶ್ವ ವಜ್ರ’ ಶುಕ್ರವಾರ ಕಂಕನಾಡಿಯಲ್ಲಿರುವ ಮಳಿಗೆಯಲ್ಲಿ ಉದ್ಘಾಟನೆಗೊಂಡಿತು.
ಯೆನೆಪೊಯ ಸಮೂಹ ಸಂಸ್ಥೆಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ ‘ವಿಶ್ವವಜ್ರ’ ಪ್ರದರ್ಶನವನ್ನು ಉದ್ಘಾಟಿಸಿದರು.
ಎಸ್‌ಎಂಆರ್ ಗ್ರೂಪ್‌ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಇಟಾಲಿಯನ್ ಸಂಗ್ರಹವನ್ನು, ಇನ್‌ಲ್ಯಾಂಡ್ ಗ್ರೂಪ್‌ನ ಸಿಎಂಡಿ ಸಿರಾಜ್ ಅಹ್ಮದ್ ಬೆಲ್ಜಿಯಂ ಸಂಗ್ರಹ, ಮುಕ್ಕಾ ಸೀಫುಡ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಕೆ. ಮುಹಮ್ಮದ್ ಹಾರಿಸ್ ಫ್ರೆಂಚ್ ಸಂಗ್ರಹ, ಎ.ಕೆ. ಗ್ರೂಪ್‌ನ ಆಡಳಿತ ನಿರ್ದಶಕ ಎ.ಕೆ.ಅಹ್ಮದ್ ಹಾಜಿ ಅಮೆರಿಕದ ಸಂಗ್ರಹವನ್ನು, ಹಸನ್ ಹಾಜಿ ಮತ್ತು ಕಂಪೆನಿಯ ಆಡಳಿತ ನಿರ್ದೇಶಕ ಬಿ.ಕುಂಞಿ ಅಹ್ಮದ್ ಸಿಂಗಾಪುರ ಸಂಗ್ರಹವನ್ನು, ಎಕ್ಸ್‌ಪಟೈಸ್ ಗ್ರೂಪ್‌ನ ಅಧ್ಯಕ್ಷ ಕೆ.ಎಸ್.ಸೈಯದ್ ಕರ್ನಿರೆ ತುರ್ಕಿಶ್ ಸಂಗ್ರಹವನ್ನು ಅನಾವರಣಗೊಳಿಸಿದರು. ಗ್ರೇಡಿಂಗ್ ಯಂತ್ರವನ್ನು ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಉದ್ಘಾಟಿಸಿದರು.
‘ನಂಡೆ ಪೆಂಙಲ್’ ಅಭಿಯಾನದ ಅಧ್ಯಕ್ಷ ಎ.ಎಚ್.ನೌಶಾದ್ ಹಾಜಿ ಸೂರಲ್ಪಾಡಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಜಿ.ಮುಹಮ್ಮದ್ ಹನೀಫ್, ಸುಲ್ತಾನ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎಂ.ಅಬ್ದುರ್ರವೂಫ್, ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ.ಅಬ್ದುಲ್ ರಹೀಂ, ಸ್ಥಾಪಕಾಧ್ಯಕ್ಷ ಕುಂಞಿ ಅಹ್ಮದ್ ಹಾಜಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯೆನೆಪೊಯ ಅಬ್ದುಲ್ಲಾ ಕುಂಞಿ ಅವರು, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನವರು ಮಂಗಳೂರಿನ ಜನತೆಗೆ ಪರಿಚಯಿಸಿರುವ ‘ವಿಶ್ವವಜ್ರ’ ಬೃಹತ್ ವಜ್ರಗಳ ಪ್ರದರ್ಶನ ಉದ್ಘಾಟಿಸಿರುವುದು ಸಂತೋಷವಾಗಿದೆ. ಸಂಸ್ಥೆಯು ಯಶಸ್ಸಿನೊಂದಿಗೆ ಮುಂದುವರಿಯಲಿ ಎಂದು ಹಾರೈಸಿದರು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಉತ್ಕೃಷ್ಟ ವಜ್ರಗಳ ಈ ಪ್ರದರ್ಶನವು ಗ್ರಾಹಕರಿಗೆ ವಿಶ್ವದ ಅತ್ಯುತ್ತಮ ವಜ್ರಾಭರಣಗಳನ್ನು ನೋಡುವ ಅಪರೂಪದ ಅವಕಾಶವನ್ನು ಕಲ್ಪಿಸಿದೆ. ಐಜಿಐ ಪ್ರಮಾಣೀಕೃತ ವಿಶ್ವದೆಲ್ಲೆಡೆಯ ಸುಮಾರು 10,000 ಕ್ಯಾರೆಟ್ ಗಳಿಗಿಂತಲೂ ಅಧಿಕ ವಜ್ರಾಭರಣಗಳ ಅಪಾರ ಸಂಗ್ರಹ ಪ್ರದರ್ಶನದಲ್ಲಿ ಲಭ್ಯ ಇದೆ. 8,000 ರೂ. ರಿಯಾಯಿತಿ ಪ್ರದರ್ಶನದಲ್ಲಿ ಡೈಮಂಡ್ ಕ್ಯಾರೆಟ್ ಒಂದಕ್ಕೆ 8,000 ರೂ. ಗಳ ವಿಶೇಷ ರಿಯಾಯಿತಿ ಕೂಡಾ ಲಭ್ಯವಾಗಲಿದೆ.
ಇಟಲಿ, ಫ್ರಾನ್ಸ್, ಬೆಲ್ಜಿಯಂ, ಸಿಂಗಾಪುರ, ಟರ್ಕಿ, ಮಧ್ಯ ಏಶ್ಯದ ವಿಭಿನ್ನ ಹಾಗೂ ಅಪರೂಪದ ವಜ್ರಾಭರಣಗಳ ಸಂಗ್ರಹದಲ್ಲಿ ವಿಶೇಷ ವಧುವಿನ ಆಭರಣಗಳೂ ಪ್ರದರ್ಶನದಲ್ಲಿ ಇದೆ. ಡೈಮಂಡ್‌ನ ಉತ್ಕೃಷ್ಟತೆಯನ್ನು ಪರಿಶೀಲಿಸುವ ಮೆಶಿನ್ ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇದಲ್ಲದೆ ಪ್ರದರ್ಶನದಲ್ಲಿ ಕಡಿಮೆ ತೂಕದ ಹಾಗೂ ವಿಶೇಷ ‘ಪ್ರಿನ್ಸೆಸ್’ ವಜ್ರಾಭರಣಗಳ ಸಂಗ್ರಹವೂ ಗ್ರಾಹಕರನ್ನು ಆಕರ್ಷಿಸಲಿವೆ.







