ಕಂದಹಾರ್ ನಲ್ಲಿ ಕಾರ್ ಬಾಂಬ್ ಸ್ಫೋಟ: 8 ಪೊಲೀಸರ ಸಾವು

ಕಂದಹಾರ್, ಡಿ. 22: ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತ ಕಂದಹಾರ್‌ನ ಮೈವಂಡ್ ಜಿಲ್ಲೆಯ ಪೊಲೀಸ್ ಕೇಂದ್ರ ಸ್ಥಾನದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 8 ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ ನಡೆದ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
‘‘ಕಾರ್ ಬಾಂಬ್ ಸ್ಫೋಟದ ಎಲ್ಲ ಸಂತ್ರಸ್ತರು ಸ್ಥಳೀಯ ಪೊಲೀಸರು’’ ಎಂದು ಕಂದಹಾರ್ ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
ಆತ್ಮಹತ್ಯಾ ಬಾಂಬರ್ ಓರ್ವ ಸ್ಫೋಟಕಗಳಿಂದ ತುಂಬಿದ್ದ ಕಾರನ್ನು ಪೊಲೀಸ್ ಪ್ರಧಾನ ಕೇಂದ್ರಕ್ಕೆ ನುಗ್ಗಿಸಿ ಸ್ಫೋಟಿಸಿದನು ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಪೊಲೀಸರು ಹಾಗೂ ಸೈನಿಕರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.
Next Story





