Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಕ್ಕಳಿಗೆ ಆಡುವ ಹಕ್ಕನ್ನು ನಿರಾಕರಿಸದಿರಿ...

ಮಕ್ಕಳಿಗೆ ಆಡುವ ಹಕ್ಕನ್ನು ನಿರಾಕರಿಸದಿರಿ : ಸಚಿನ್

ರಾಜ್ಯಸಭೆಯಲ್ಲಿ ಸಿಗದ ಅವಕಾಶ: ಫೇಸ್‌ಬುಕ್‌ ಮೊರೆಹೋದ ತೆಂಡೂಲ್ಕರ್‌

ವಾರ್ತಾಭಾರತಿವಾರ್ತಾಭಾರತಿ22 Dec 2017 10:35 PM IST
share
ಮಕ್ಕಳಿಗೆ ಆಡುವ ಹಕ್ಕನ್ನು ನಿರಾಕರಿಸದಿರಿ : ಸಚಿನ್

ಹೊಸದಿಲ್ಲಿ, ಡಿ.22: ಪ್ರತೀ ಮಗುವಿಗೂ ಶಾಲೆಯಲ್ಲಿ ಆಡುವ ಹಕ್ಕನ್ನು ಒದಗಿಸಬೇಕು. ಈ ದಿನ ಆಡಿದ್ದೀರಾ, ಯಾವ ಆಟ ಆಡಿದ್ದೀರಿ ಎಂದು ಪೋಷಕರು ತಮ್ಮ ಮಕ್ಕಳನ್ನು ಕೇಳುವಂತಾದರೆ ಅದಕ್ಕಿಂತ ಸಂತಸದ ವಿಷಯ ಬೇರೊಂದಿಲ್ಲ. ಕ್ರೀಡೆ ಭರವಸೆಯನ್ನು ಹೆಚ್ಚಿಸುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ರಾಜ್ಯ ಸಭಾ ಸದಸ್ಯ ಸಚಿನ್ ತೆಂಡೂಲ್ಕರ್‌ಹೇಳಿದ್ದಾರೆ.

  ನಮ್ಮ ದೇಶವನ್ನು ಕ್ರೀಡೆಯನ್ನು ಇಷ್ಟಪಡುವ ರಾಷ್ಟ್ರದ ಬದಲು ಕ್ರೀಡೆಯಲ್ಲಿ ತೊಡಗಿಸಿಕೊಂಡ, ಸಾಧನೆ ಮಾಡಿದ ರಾಷ್ಟ್ರವನ್ನಾಗಿ ಪರಿವರ್ತಿಸಬೇಕಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ತಮ್ಮ ಪ್ರಪ್ರಥಮ ಚರ್ಚೆಯನ್ನು ಆರಂಭಿಸಲು ಮಾಡಿದ ಪ್ರಯತ್ನ ವಿಫಲಗೊಂಡ ಬಳಿಕ ಶುಕ್ರವಾರ ಫೇಸ್‌ಬುಕ್‌ನಲ್ಲಿ ಮನದಾಳದ ಮಾತುಗಳನ್ನು ಸಚಿನ್ ಹಂಚಿಕೊಂಡರು. ಕನಸುಗಳನ್ನೂ ನನಸಾಗಿಸಬಹುದು. ಕ್ರಿಕೆಟ್ ಆಡಲು ಆರಂಭಿಸಿದಾಗ ನನ್ನಲ್ಲಿ ನೂರಾರು ಕನಸುಗಳಿದ್ದವು. ಕ್ರಿಕೆಟ್ ನನ್ನ ಜೀವನವಾಗಿದೆ. ನನ್ನ ತಂದೆ ನನ್ನ ಕನಸನ್ನು ಬೆಂಬಲಿಸಿದರು ಎಂದು ಸಚಿನ್ ಹೇಳಿದ್ದಾರೆ.

ಇದರ ಜೊತೆಗೆ ಆರ್ಥಿಕ ಅಭಿವೃದ್ಧಿ, ಬಡತನ, ಆಹಾರದ ಭದ್ರತೆ, ಆರೋಗ್ಯ ರಕ್ಷಣೆ ಇತ್ಯಾದಿ ಹಲವು ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಜೊತೆಗೆ ಓರ್ವ ಕ್ರೀಡಾಪಟುವಾಗಿ ಕ್ರೀಡೆ, ಆರೋಗ್ಯ, ದೈಹಿಕ ಕ್ಷಮತೆಯ ಬಗ್ಗೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುತ್ತೇನೆ ಎಂದವರು ಹೇಳಿದ್ದಾರೆ. 2020ರ ವೇಳೆಗೆ ಭಾರತವು ಅತ್ಯಧಿಕ ಹದಿಹರೆಯದ ಪ್ರಜೆಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ . ಆದರೆ ದೈಹಿಕ ಕ್ಷಮತೆಯ ವಿಷಯಕ್ಕೆ ಬಂದರೆ, ಭಾರತವು ವಿಶ್ವದ ಮಧುಮೇಹಿ ರೋಗಿಗಳ ರಾಜಧಾನಿ ಎನಿಸಿದ್ದು ದೇಶದಲ್ಲಿ ಸುಮಾರು 75 ಮಿಲಿಯನ್‌ಗೂ ಅಧಿಕ ಮಂದಿ ಮಧುಮೇಹಿಗಳಿದ್ದಾರೆ. ಅಲ್ಲದೆ ಬೊಜ್ಜಿನ ಸಮಸ್ಯೆ ಕೂಡಾ ದೇಶದ ಪ್ರಜೆಗಳನ್ನು ಕಾಡುತ್ತಿದ್ದು ಅತೀ ಹೆಚ್ಚು ಸ್ಥೂಲಕಾಯದ ಪ್ರಜೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿರುವುದು ಕಳವಳಕ್ಕೆ ಕಾರಣವಾಗಿದೆ. ಈ ರೋಗಗಳು ಮುಂದಿಡುವ ಆರ್ಥಿಕ ಹೊರೆ ದೇಶದ ಅಭಿವೃದ್ಧಿಯ ಹಾದಿಯಲ್ಲಿ ಬಲುದೊಡ್ಡ ತಡೆಯಾಗಿದೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಆದ್ದರಿಂದ ನಿಯಮಿತ ವ್ಯಾಯಾಮ ಅಥವಾ ಕ್ರೀಡೆಯಲ್ಲಿ ತೊಡಗಿಸಿಕೊಂಡು ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕು. ಮೊಬೈಲ್ ಫೋನ್‌ಗಳ ಈ ಯುಗದಲ್ಲಿ ನಾವೆಲ್ಲಾ ಚಲನೆಯನ್ನೇ ಮರೆತವರಂತೆ ಆಗಿಬಿಟ್ಟಿದ್ದೇವೆ. ದೇಶದ ಕೇವಲ ಶೇ.4ರಷ್ಟು ಜನಸಂಖ್ಯೆಯನ್ನು ಹೊಂದಿರುವ ಭಾರತದ ಈಶಾನ್ಯ ಭಾಗದಲ್ಲಿ ಕ್ರೀಡೆ ಭಾರೀ ಜನಪ್ರಿಯವಾಗಿದ್ದು ಮೇರಿ ಕೋಮ್, ಮೀರಾಬಾಯಿ ಚಾನು, ದೀಪಾ ಕರ್ಮಾರ್ಕರ್, ಬೈಚುಂಗ್ ಭುಟಿಯಾ, ಸಂಗೀತಾ ಚಾನುರಂತಹ ಹಲವಾರು ಅಪ್ರತಿಮ ಸಾಧಕರು ದೇಶದ ಪ್ರತಿಷ್ಟೆ ಬೆಳಗಿಸಿದ್ದಾರೆ. ದೇಶದ ಉಳಿದ ಭಾಗಗಳಲ್ಲೂ ಕ್ರೀಡೆಯನ್ನು ಇದೇ ರೀತಿಯಲ್ಲಿ ಇಷ್ಟಪಡುವ, ಅದರಲ್ಲಿ ಸಾಧನೆ ಮಾಡಲು ಯುವಜನತೆ ಮುಂದಾಗಬೇಕಿದೆ ಎಂದವರು ಹೇಳಿದರು.

ಕ್ರೀಡೆಯಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ರಗ್ಬಿ ವಿಶ್ವಕಪ್ ಟೂರ್ನಿ ಸಂಘಟಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ. ಕ್ರೀಡೆಗೆ ದೇಶಕಟ್ಟುವ ಸಾಮರ್ಥ್ಯವಿದೆ. ಕ್ರೀಡೆ ವೈಯಕ್ತಿಕ ಸ್ವಭಾವವನ್ನು ರೂಪಿಸುತ್ತದೆ ಮತ್ತು ವೈಯಕ್ತಿಕ ಸ್ವಭಾವ ದೇಶದ ಸ್ವಭಾವದ ಪ್ರತಿರೂಪವಾಗಿರುತ್ತದೆ ಎಂದು ಸಚಿನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X