ಗೋವಿಂದೇಗೌಡ ಕೊಲೆ ಪ್ರಕರಣ : ನಾಲ್ವರ ಬಂಧನ

ಬೆಂಗಳೂರು, ಡಿ. 20: ಬಿಬಿಎಂಪಿಯ ಮಾಜಿ ಸದಸ್ಯ ಗೋವಿಂದಗೌಡ ಅವರ ಕೊಲೆ ಪ್ರಕರಣದ ಸಂಬಂಧ ರಾಜಗೋಪಾಲನಗರ ಠಾಣಾ ಪೊಲೀಸರು, ನಾಲ್ವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ನಗರದ ಹೆಗ್ಗನಹಳ್ಳಿಯ ನಟರಾಜ(36), ಸಂತೋಷ್(22), ಹೆಗ್ಗನಹಳ್ಳಿಯ ರಾಜಶೇಖರ್(27), ದೀಪಾಂಜಲಿ ನಗರದ ಮಂಜುನಾಥ್(24) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಕೃತ್ಯದಲ್ಲಿ ತೊಡಗಿದ್ದ ಎನ್ನಲಾದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story





