ಮಂಡ್ಯ ರಮೇಶ್, ಸಾಧುಕೋಕಿಲರಿಂದ ಲೈಂಗಿಕ ಕಿರುಕುಳ : ಆರೋಪ
ಯುವತಿಯಿಂದ ಪೊಲೀಸ್ ಕಮಿಷನರ್ ಗೆ ದೂರು

ಮೈಸೂರು,ಡಿ.22: ಸೆಲೂನ್ ಮತ್ತು ಸ್ಪಾ ಸೆಂಟರ್‍ನಲ್ಲಿ ಬಾಡಿ ಮಸಾಜ್ ನೆಪದಲ್ಲಿ ಇಬ್ಬರು ನಟರು ಹಾಗೂ ಮೂವರು ಪೊಲೀಸ್ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು ನಗರ ಪೊಲೀಸ್ ಕಮಿಷನರ್ ಅವರಿಗೆ ಲಿಖಿತ ದೂರು ನೀಡಿದ್ದಾಳೆ.
“ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯಿಂದ ಪಾರ್ಲರ್‍ನಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬಳು ನನ್ನನ್ನು ರಾಜೇಶ್ ಎಂಬಾತನ ಬಳಿ ಕಳುಹಿಸಿದರು. ಆದರೆ ರಾಜೇಶ್ ಪಾರ್ಲರ್‍ನಲ್ಲಿ ಪುರುಷರಿಗೆ ಬಾಡಿ ಮಸಾಜ್ ಮಾಡುವಂತೆ ಬಲವಂತಪಡಿಸಿದರು. ನನ್ನನ್ನು ರೂಮಿನಲ್ಲಿ ಕೂಡಿ ಹಾಕಿದರು. ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರಾದ ಸಾಧು ಕೋಕಿಲ ಹಾಗೂ ಮಂಡ್ಯ ರಮೇಶ್ ಕೂಡ ಕಿರುಕುಳ ನೀಡಿದ್ದಾರೆ. ಹಣದ ಆಮಿಷ ಒಡ್ಡಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.
ಮಾಲಕ ರಾಜೇಶ್ ಕೂಡ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಬೆಂಗಳೂರಿನಿಂದ ಮೂವರು ಪೊಲೀಸ್ ಅಧಿಕಾರಿಗಳು ಪಾರ್ಲರ್‍ಗೆ ಬಂದಿದ್ದು, ಅವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು. ಅವರು ಯಾರೆಂದು ನನಗೆ ಗೊತ್ತಿಲ್ಲ. ಆದರೆ ರಾಜೇಶ್ ಇದನ್ನ ನನ್ನ ಬಳಿ ಹೇಳಿ ಸಹಕರಿಸುವಂತೆ ತಾಕೀತು ಮಾಡಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.





