ಬದ್ರಿಯಾ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

ಮಂಗಳೂರು, ಡಿ.22: ನಗರದ ಬದ್ರಿಯಾ ಪ.ಪೂ. ಕಾಲೇಜಿನಲ್ಲಿ ಸುಮಾರು 4 ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮುಖ್ಯ ಶಿಕ್ಷಕಿ ಶಹನಾಝ್ ಬಾನು ಮತ್ತು ಪದವೀಧರ ಸಹಾಯಕರಾಗಿದ್ದ ಆಲಿಕುಂಞಿ ಡಿ.ಕೆ. ಅವರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು.
ಪ್ರಾಂಶುಪಾಲ ಡಾ. ಇಸ್ಮಾಯೀಲ್ ಎನ್. ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಪಿ.ಸಿ.ಹಾಶಿರ್, ಪ್ರೊ. ರಹ್ಮತ್ ಅಲಿ, ಮುಹಮ್ಮದ್ ಇಕ್ಬಾಲ್, ಸರಳಾ ವರ್ಗೀಸ್ ಉಪಸ್ಥಿತರಿದ್ದರು. ನುಸ್ರತ್ ಫಾತಿಮಾ, ಸುಬ್ರಹ್ಮಣ್ಯ ಶಾಸ್ತ್ರಿ ಸನ್ಮಾನ ಪತ್ರ ವಾಚಿಸಿದರು. ಯೂಸುಫ್ ಡಿ. ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ವಂದಿಸಿದರು.
Next Story





