ಡಿ.24: ಕೋಟೆಕಾರ್ ನೂರ್‌ಮಹಲ್‌ನಲ್ಲಿ ಸಾಮೂಹಿಕ ಸರಳ ವಿವಾಹ
ಮಂಗಳೂರು, ಡಿ.22: ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ವತಿಯಿಂದ ‘ಸಾಂತ್ವನ’ದ ಅಂಗವಾಗಿ 6ನೆ ವರ್ಷದ ಸಾಮೂಹಿಕ ಸರಳ ವಿವಾಹವು ಕೋಟೆಕಾರ್ ನೂರ್‌ಮಹಲ್‌ನಲ್ಲಿ ಡಿ.24ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಅಲ್‌ಹಾಜ್ ಕೆ.ಪಿ.ಹುಸೈನ್ ಸಅದಿ ಅಧ್ಯಕ್ಷತೆ ವಹಿಸಲಿದ್ದು, ಅಲ್‌ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಖಾಹ್‌ನ ನೇತೃತ್ವ ನೀಡಲಿದ್ದಾರೆ.
ಸಿಟಿಎಂ ಸೈಯದ್ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್, ಸಚಿವ ಯು.ಟಿ.ಖಾದರ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಂಎಸ್ಸೆಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್, ದ.ಕ.ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್‌ವೈಎಸ್ ಮ್ಯಾರೇಜ್ ಸೆಲ್‌ನ ಅಧ್ಯಕ್ಷ ಯು.ಬಿ.ಮುಹಮ್ಮದ್ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಎನ್.ಎಸ್.ಉಮರ್ ತಿಳಿಸಿದ್ದಾರೆ.
Next Story





