ಸಯೀದ್ ಪಕ್ಷವನ್ನು ಉಗ್ರ ಪಟ್ಟಿಗೆ ಸೇರಿಸಿದ ಅಮೆರಿಕ

ಇಸ್ಲಾಮಾಬಾದ್, ಡಿ. 22: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಝ್ ಸಯೀದ್ ಪ್ರಾಯೋಜಕತ್ವದ ಮಿಲಿ ಮುಸ್ಲಿಮ್ ಲೀಗ್‌ನ್ನು ಅಮೆರಿಕ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.
ಇನ್ನೂ ಹಲವು ಸಂಘಟನೆಗಳು ಈ ಪಟ್ಟಿಗೆ ಶೀಘ್ರವೇ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
‘‘ಈ ವಲಯದ ಅಮೆರಿಕದ ಆದ್ಯತೆಗಳನ್ನು ಸಾಧಿಸುವಲ್ಲಿ ಪಾಕಿಸ್ತಾನ ಪ್ರಮುಖ ಭಾಗೀದಾರನಾಗಿದ್ದರೂ, ತನ್ನ ನೆಲದಿಂದ ಕೆಲಸ ಮಾಡುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕೆಂದು ಅಮೆರಿಕ ನಿರೀಕ್ಷಿಸುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಡಾನ್’ ದೈನಿಕ ಶುಕ್ರವಾರ ವರದಿ ಮಾಡಿದೆ.
Next Story





