ಜ.7: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿ ಭೇಟಿ; ವಿವಿಧ ಕಾಮಗಾರಿಗಳ ಉದ್ಘಾಟನೆ
ಬೆಳ್ತಂಗಡಿ, ಡಿ. 22: ರಾಜ್ಯದ ಮುಖ್ಯಂತ್ರಿ ಸಿದ್ದರಾಮಯ್ಯ ಅವರು ಜನವರಿ 7 ರಂದು ಬೆಳ್ತಂಗಡಿಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಅವರು ಬೆಳ್ತಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿವಿಧಾನಸೌಧ ಸೇರಿದಂತೆ ಸುಮಾರು 60 ಕೋಟಿ ರೂಗಳ ವಿವಿಧ ಕಾಮಗಾರಿಗಳ ಉದ್ಘಾಟ ನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಬೆಳ್ತಂಗಡಿ ಶಾಸಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ ಕೆ ಸಂತ ಬಂಗೇರ ಅವರು ತಿಳಿಸಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದರು. ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ ಸುಮಾರು ಎಂಟು ಕೋಟಿ ರೂಗಳ ವೆಚ್ಚದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣಗೊಂಡಿದ್ದು ಮಿನಿವಿಧಾನಸೌಧ ನಾಲ್ಕು ಅಂತಸ್ತಿನ ಕಟ್ಟಡವಾಗಿದ್ದು ಒಟ್ಟು 1800 ಚದರ ಮೀಟರ್‌ಗಳ ವಿಸ್ತಾರ ಹೊಂದಿದೆ. ಮುಂದುವರಿದ ಕಾಮಗಾರಿಯಾಗಿ ನಾಲ್ಕು ಕೋಟಿ ವೆಚ್ಚದಲ್ಲಿ ವಿಸ್ತರಣೆಗೊಳ್ಳಲಿದೆ ಮುಂದಿನ ದಿನಗಳಲ್ಲಿ ಒಂದೇ ಸೂರಿನಡಿ ಕಂದಾಯ ಇಲಾಖೆಯ ಎಲ್ಲ ಸೌಲಭ್ಯಗಳೂ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ನಗರಕ್ಕೆ 13 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ, ತಾಲೂಕಿನ ಪುತ್ತಿಲ ಎಂಬಲ್ಲಿ 1.25 ಕೋಟಿಯ ಸೇತುವೆ, 3.13 ಕೋ ವೆಚ್ಚದ ಪಾಲೇದು-ಕುದ್ರಡ್ಕ ರಸ್ತೆ, 78 ಲಕ್ಷ ವೆಚ್ಚದ ಬೆಳ್ತಂಗಡಿಯ ಮೆಸ್ಕಾಂನ ನೂತನ ಕಟ್ಟಡ, 3.71 ಕೊ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗುರಿಪಳ್ಳ- ಬೊಳ್ಳಾಜೆ ರಸ್ತೆ, ಎ.ಪಿ.ಎಂ.ಸಿ ಯಲ್ಲಿ 1.79 ಕೋಟಿಯ ವಿವಿಧ ಕಾಮಗಾರಿಗಳು, 10 ಕೋ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೇಣೂರು ವಿದ್ಯತ್ ಸಬ್‌ಸ್ಟೇಶನ್,ಹಾಗೂ ಮರು ಡಾಮರೀಕರಣಗೊಂಡಿರುವ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ ಉದ್ಘಾಟನೆಗೊಳ್ಳಲಿದೆ.
ಇದಲ್ಲದೆ ಬೆಳ್ತಂಗಡಿ ನಗರದಲ್ಲಿ 2 ಕೋ ವೆಚ್ಚದ ನಗರೋತ್ಥಾನ ಕಾಮಗಾರಿಗಳು, 4.74 ಕೋ ವೆಚ್ಚದಲ್ಲಿ ಗುಂಡೂರಿ-ಅಂಗರ ಕರಿಯ ತುಂಬಿದ ಪಲ್ಕೆ ಸೇತುವೆ ರಚನೆ, 2.13 ಕೋ ವೆಚ್ಚದಲ್ಲಿ ಪಾಲೇದು ಕುದ್ರಡ್ಕ ರಸ್ತೆಯಲ್ಲಿ ಎರಡು ಸೇತುವೆಗಳ ರಚನೆ, 3.87 ಕೋ ವೆಚ್ಚದಲ್ಲಿ ಬಂದಾರು ಗ್ರಾಮದ ಬೋಲೋಡಿ-ನೈರೋಲ್ತಡ್ಕ-ಗೋಳಿತ್ತಾಡಿ ರಸ್ತೆಯಲ್ಲಿ ಸೇತುವೆ ರಚನೆ, 4,74 ಕೋ ನೆರಿಯದ ಕೋಲೋಡಿ-ಕೋಲ್ನ ರಸ್ತೆಯಲ್ಲಿ 5 ಸೇತುವೆಗಳ ರಚನೆ, 85 ಲಕ್ಷ ವೆಚ್ಚದ ಲಾಯಿಲ ರಾಗವೇಂದ್ರ ಮಠದ ಬಳಿ ಕಿಂಡಿ ಅಣೆ ಕಟ್ಟುನಿರ್ಮಾಣ, 2.35 ಕೋ ವೆಚ್ಚದಲ್ಲಿ ಪೂಂಜಾಲಕಟ್ಟೆ ಹೊಸ ಪೋಲೀಸ್ಠಾಣಾ ಕಟ್ಟಡದ ನಿರ್ಮಾಣ, 1.20 ಕೋ ಬೆಳ್ತಂಗಡಿ ಮಾರುಕಟ್ಟೆಪ್ರಾಂಗಣದಲ್ಲಿ ಎರಡು ಗೋದಾಮು ಕಟ್ಟಡ ನಿರ್ಮಾಣ, 1.5 ಕೋ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್‌ಭವನದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಈ ಸಂದರ್ಭ 1800ಮಂದಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಲಾಗುತ್ತದೆ. ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಬೆಳ್ತಂಗಡಿಯಲ್ಲಿ ಸಬಾಕಾರ್ಯಕ್ರಮ ನಡೆಯಲಿದ್ದು ಸಾವಿರಾರು ಸಮಖ್ಯೆಯಲ್ಲಿ ಕಾರ್ಯರ್ತರು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ್ ವಿ.ಕಿಣಿ, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಜಶೇಖರ ಅಜ್ರಿ ಉಪಸ್ಥಿತರಿದ್ದರು.
ಈಗಾಗಲೇ 35ಸಾವಿರ ಬಿಪಿಎಲ್ ಕಾರ್ಡು, 35ಸಾವಿರ ಅಕ್ರಮಸಕ್ರಮ ಮಂಜೂರಾತಿ, 21 ಸಾವಿರ 94 ಸಿ ನೀಡಲಾಗಿದೆ. ಬೆಳ್ತಂಗಡಿ ವಕೀಲರ ಸಂಘಕ್ಕೆ 84ಲಕ್ಷ ರೂ ಮಂಜೂರಾಗಿದೆ. ಬೆಳ್ತಂಗಡಿ ತಾಲೂಕು ಪಂಚಾಯತ್ ಕಟ್ಟಡಕ್ಕೆ 3.5ಕೋಟಿ ರೂ ಪ್ರಸ್ತಾವನೆ ಕಳಿಸಲಾಗಿದ್ದು ಶೀಘ್ರ ಮಂಜೂರಾತಿಯಾಗಲಿದೆ.
1918ರಲ್ಲಿ ತಾಲೂಕು ಕಛೇರಿ ಕಟ್ಟ ನಿರ್ಮಾಣವಾಗಿದ್ದು ಆಗಿನ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದಲ್ಲಿ ನ್ಯಾಯಾಲಯ ಮತ್ತು ಬಂದಿಖಾನೆ ಬಳಸುವಂತೆ ನಿರ್ಮಿಸಲಾಗಿದ್ದು ಇದೀಗ 100ವರ್ಷಗಳ ಬಳಿಕ ಮಿನಿ ವಿಧಾನಸೌದ ಉದ್ಘಾಟನೆಗೊಳ್ಳುತ್ತಿರುವುದು ಈಗಿನ ಸರಕಾರ ತಾಲೂಕಿನ ಜನತೆಗೆ ನೀಡಿದ ಕೊಡುಗೆಯಾಗಿದೆ.
ಮುಖ್ಯಮಂತ್ರಿಯವರು ಜ 7ರಂದು ಬೆಳಗ್ಗೆ 10.30 ಕ್ಕೆ ಆಗಮಿಸಲಿದ್ದು ಆರಂಭದಲ್ಲಿ ಗುರುವಾಯನಕೆರೆಯಲ್ಲಿ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಉದ್ಗಾಟನೆಯನ್ನು ನೆರವೇರಿಸಿ ಬಳಿಕ ನಗರದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ನೆರವೇರಿಸಿ ಬಳಿಕ ಮಿನಿವಿಧಾನಸೌಧವನ್ನು ಉದ್ಘಾಟಿಸಲಿ ದ್ದಾರೆ ನಂತರ ನಡೆಯುವ ಸಭೆಯಲ್ಲಿ ಇತರೆ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.







