ತಿಯನಾನ್ಮೆನ್ ಚೌಕದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 10,000: ಬ್ರಿಟಿಶ್ ಗುಪ್ತ ಕೇಬಲ್

ಲಂಡನ್, ಡಿ. 23: 1989ರ ಜೂನ್‌ನಲ್ಲಿ ಬೀಜಿಂಗ್‌ನ ತಿಯಾನಾನ್ಮೆನ್ ಚೌಕದಲ್ಲಿ ಪ್ರಜಾಪ್ರಭುತ್ವ ಪರ ಧರಣಿನಿರತರ ವಿರುದ್ಧ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 10,000 ಮಂದಿ ಮೃತಪಟ್ಟಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಲಾದ ಬ್ರಿಟಿಶ್ ರಾಜತಾಂತ್ರಿಕ ಸುದ್ದಿ ಸಂದೇಶವೊಂದು ತಿಳಿಸಿದೆ.
ಗಾಯಗೊಂಡ ಹುಡುಗಿಯರನ್ನು ಬಯೊನೆಟ್‌ನಿಂದ ಇರಿಯಲಾಯಿತು, ಸೇನಾ ವಾಹನಗಳು ಮೃತದೇಹಗಳನ್ನು ಹೊಸಕಿ ಹಾಕಿದವು ಹಾಗೂ ಮಾನವ ದೇಹದ ಅವಶೇಷಗಳನ್ನು ಚರಂಡಿಗಳಿಗೆ ಹರಿಯಬಿಡಲಾಯಿತು ಎಂಬುದಾಗಿ ಘಟನೆ ನಡೆದ 28 ವರ್ಷಗಳ ಬಳಿಕ ಬಹಿರಂಗಗೊಳಿಸಲಾದ ದಾಖಲೆ ತಿಳಿಸಿದೆ.
‘‘ಈ ಭೀಕರ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 10,000 ಆಗಿದೆ’’ ಎಂದು ಚೀನಾಕ್ಕೆ ಅಂದಿನ ಬ್ರಿಟಿಶ್ ರಾಯಭಾರಿಯಾಗಿದ್ದ ಅಲನ್ ಡೊನಾಲ್ಡ್ ಲಂಡನ್‌ಗೆ ಕಳುಹಿಸಿದ್ದ ಗುಪ್ತ ಟೆಲಿಗ್ರಾಂ ತಿಳಿಸಿದೆ.
Next Story





