'ಮೀನುಗಾರಿಕಾ ವಿಶೇಷ ಮಂತ್ರಾಲಯ ಸ್ಥಾಪನೆ ಬೇಡಿಕೆಗೆ ಬೆಂಬಲ'
ಮೀನುಗಾರರ ಕಾಂಗ್ರೆಸ್ ಸಮಾವೇಶದಲ್ಲಿ ಆಸ್ಕರ್ ಫೆರ್ನಾಂಡಿಸ್

ಉಡುಪಿ, ಡಿ.23: ಸಂಘಟನೆಯ ಮೂಲಕ ಮಾತ್ರ ಮೀನುಗಾರರ ಬದುಕಿಗೆ ಭದ್ರತೆ ಒದಗಿಸಲು ಸಾಧ್ಯ. ಕೇಂದ್ರದಲ್ಲಿ ಮೀನುಗಾರಿಕಾ ವಿಶೇಷ ಮಂತ್ರಾಲ ಯ ಸ್ಥಾಪಿಸಬೇಕೆಂಬ ಮೀನುಗಾರರ ಬೇಡಿಕೆಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡು ತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪದಾಧಿಕಾರಿ ಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಘಟಿತ ಹೋರಾಟದಿಂದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಒಳನಾಡ ಮತ್ತು ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರರು ಸಂಘಟನೆಯ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬೇಕು ಎಂದ ಅವರು, ಕಾಂಗ್ರೆಸ್ ಪಕ್ಷ ಮೀನುಗಾರಿಕೆಗೆ ಸಾಕಷ್ಟು ಯೋಜನೆ ಗಳನ್ನು ಜಾರಿಗೊಳಿಸಿದ್ದು, ಮೀನುಗಾರರಿಗೆ ಡಿಸೇಲ್ ಸಬ್ಸಿಡಿ ಸಿಗುವಂತೆ ಮಾಡಿದೆ ಎಂದರು.
ಇಂದು ಮತ್ಸ ಕ್ಷಾಮವು ಕರಾವಳಿ ಸಮುದ್ರವನ್ನು ಕಾಡುತ್ತಿದೆ. ಮೀನುಗಳು ಮೊಟ್ಟೆ ಇಡುವ ಸಂದರ್ಭದಲ್ಲಿ ಮೀನುಗಾರಿಕೆ ನಿಷೇಧವಿದ್ದರೂ ಮೀನುಗಾರಿಕೆ ನಡೆಸುತ್ತಿರುವುದೇ ಇದಕ್ಕೆ ಕಾರಣ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಮೀನು ಸಂಸತಿ ವೃದ್ಧಿಸುವ ವಿಧಾನವನ್ನು ಮೀನುಗಾರರು ಕಂಡುಕೊಳ್ಳಬೇು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜರ್ನಾದನ ತೋನ್ಸೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ ಅಮೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮುಖಂಡರಾದ ಮದನ್ ಕುಮಾರ್, ಕೇಶವ್ ಕುಂದರ್, ಅಶೋಕ್ ಕುಮಾರ್ ಕೊಡವೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೇ, ಗಂಗಾಧರ ಸುರ್ವಣ, ನರಸಿಂಹ ಮೂರ್ತಿ, ಸದಾಶಿವ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮೀನುಗಾರರ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಯು.ಆರ್.ಸಭಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಮನೋಜ್ ಕರ್ಕೇರ ಸ್ವಾಗತಿಸಿ ದರು. ರಮೇಶ್ ತಿಂಗಳಾಯ ಕೋಡಿಬೆಂಗ್ರೆ ವಂದಿಸಿದರು. ರಮೇಶ್ ಕರ್ಕೆರ ಉಗ್ಗೆ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.







