ಸರಕಾರಿ ಕೆಲಸಕ್ಕೆ ಅಡ್ಡಿ ಆರೋಪ: ವ್ಯಕ್ತಿ ಬಂಧನ
ಕಾರವಾರ, ಡಿ.23: ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ತಾಲೂಕಿನ ಚಿತ್ತಾಕುಲ ಪೊಲೀಸರು ಬಂಧಿಸಿದ್ದಾರೆ. ತಹಶೀಲ್ದಾರ್ ಜಿ. ಎನ್ ನಾಯ್ಕ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮುರಳೀಧರ ಲಕ್ಷ್ಮಣ ನಾಯ್ಕ ಬಂಧಿತ ವ್ಯಕ್ತಿ. ಶನಿವಾರ ಹಣಕೋಣ ಗ್ರಾಮಕ್ಕೆ ಭೂ ಪರಿವರ್ತನೆ ಉದ್ದೇಶಕ್ಕಾಗಿ ತಹಶೀಲ್ದಾರ್ ಜಿ. ಎನ್. ನಾಯ್ಕ ತೆರಳಿದ್ದರು. ಈ ವೇಳೆ ಆಗಮಿಸಿದ ಆರೋಪಿ ತಹಶೀಲ್ದಾರ್ ವಿರುದ್ಧ ಅಸಂಬದ್ಧವಾಗಿ ಮಾತನಾಡಿ, ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಜಿ.ಎನ್ ನಾಯ್ಕ ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಡಿ.26ರವರೆಗೆ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ.
Next Story





