ಬಾಯ್ಲರ್ ಸ್ಫೋಟ: ಇಬ್ಬರಿಗೆ ಗಾಯ
ಚಿಕ್ಕಮಗಳೂರು, ಡಿ.23: ಖಾಸಗಿ ಹೋಟೆಲ್‌ವೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕೆಲಸಗಾರರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಶೃಂಗೇರಿ ಪಟ್ಟಣದ ಭಾರತಿ ಬೀದಿಯಲ್ಲಿ ಶನಿವಾರ ನಡೆದಿದೆ.
ಶೃಂಗೇರಿ ಪಟ್ಟಣದ ಭಾರತಿ ಬೀದಿಯ ಖಾಸಗಿ ಹೊಟೇಲ್‌ನಲ್ಲಿ ಕಾರ್ಮಿಕ ವೃತ್ತಿಯಲ್ಲಿದ್ದ ಸುರೇಶ್ ಮತ್ತು ರವಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಶೃಂಗೇರಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬಾಯ್ಲರ್ ಸೊ್ಫೀೀಟದಿಂದ ಹೊಟೇಲ್‌ನ ಗೋಡೆಗಳು ಬಿರುಕು ಬಿಟ್ಟಿವೆ. ಘಟನೆಯು ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Next Story





