2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಸಿದ್ದರಾಮಯ್ಯ

ಹಾವೇರಿ, ಡಿ.23: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ,ಇದು ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಶನಿವಾರ ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್‌ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಾಧನಾ ಸಂಭ್ರಮ ಸಮಾರಂಭದಲ್ಲಿ ಹಾವೇರಿ ಮತ್ತು ಬ್ಯಾಡಗಿ ವಿಧಾನಸಭಾ ಕ್ಷೇತ್ರದ 333.44 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು,ಮೈಸೂರು, ರಾಮನಗರ, ಚಾಮರಾಜನಗರ, ಚಾಮರಾಜಪೇಟೆ, ಗುಂಡ್ಲುಪೇಟೆ, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಉತ್ತರ ಕರ್ನಾ ಟಕದ ಹಲವು ಜಿಲ್ಲೆಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಹೀಗಿರುವಾಗ ಬಿಜೆಪಿ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಬಸವ ರಾಜ ಹೊರಟ್ಟಿ, ಕೋನರೆಡ್ಡಿಯಂತಹ ನಾಯಕರನ್ನು ಬಿಟ್ಟರೆ ಜೆಡಿಎಸ್‌ಗೂ ಅಭ್ಯರ್ಥಿಗಳಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪಆ್ಯಂಡ್ ಕಂಪೆನಿ ಸುಳ್ಳು ಹೇಳಿ ಕೊಂಡು ಹೋಗುತ್ತಿದ್ದಾರೆ. ಅವರ ಆರೋಪದ ಬಗ್ಗೆ ಒಂದೇ ವೇದಿಕೆ ಮೇಲೆ ಚರ್ಚೆ ಮಾಡೋಣ ಬನ್ನಿ ಎಂದರೆ ಯಡಿಯೂರಪ್ಪಚರ್ಚೆಗೆ ಬರುವುದಕ್ಕೆ ಸಿದ್ಧರಿಲ್ಲ ಎಂದು ವಾಗ್ದಾಳಿ ನಡೆಸಿದ ಸಿಎಂ, ಬಿಜೆಪಿಯವರಿಗೆ ಎರಡು ನಾಲಿಗೆ. 2014ರ ಚುನಾವಣೆಯಲ್ಲಿ ನೀಡಿದ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು ಮೂರೂವರೆ ವರ್ಷವಾದರೂ ಬಡವರಿಗೆ, ರೈತರಿಗೆ, ಕೂಲಿಕಾರರಿಗೆ ಅಚ್ಛೇದಿನ್ ಬಂದಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅನ್ನ ಭಾಗ್ಯದ ಮೂಲಕ 1.20 ಕೋಟಿ ಕುಟುಂಬಕ್ಕೆ ತಲಾ 7 ಕೆಜಿ ಅಕ್ಕಿ ವಿತರಣೆ, ಬಿಜೆಪಿ ಯೋಗ್ಯತೆ ಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿರಲಿಲ್ಲ.ನಾವುಅಧಿಕಾರಕ್ಕೆ ಬಂದ ಮೇಲೆ 1.20 ಕೋಟಿ ಪಡಿತರ ಕಾರ್ಡ್ ವಿತರಣೆ ಮಾಡಿದ್ದೇವೆ. 1.2 ಕೋಟಿ ಮಕ್ಕಳಿಗೆ ವಾರ ದಲ್ಲಿ ಐದು ದಿನ ಉಚಿತ ಹಾಲು, ವಿದ್ಯಾಸಿರಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು 1500 ರೂ ನೀಡಲಾಗುತ್ತಿದೆ. ಪ್ರತೀ ಲೀಟರ್ ಹಾಲಿಗೆ 5 ರೂ. ಸಹಾಯ ಧನ ನೀಡಲಾಗುತ್ತಿದೆ. ಅನಿಲ ಭಾಗ್ಯ, ಅಂಬೇಡ್ಕರ್ ವಾಲ್ಮೀಕಿ ಯೋಜನೆಯ ಸೌಲಭ್ಯ ಪಡೆದ ವರು ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರ ಅಸಲು ಬಡ್ಡಿ ಮನ್ನಾ ಮಾಡಿ ಋಣ ಮುಕ್ತವಾಗಿಸಿದ್ದೇವೆ. ಭಾಗ್ಯ ಜ್ಯೋತಿ ಹಣ ನೀಡದವರಿಗೂ ಮರು ಸಂಪರ್ಕ ಕೊಡಿಸಿದ್ದೇವೆ. ನಾನು ಹೇಳಿ ದಲ್ಲಿ ಒಂದೇ ಒಂದು ಸುಳ್ಳಾಗಿದ್ದರೆ ಈ ರಾಜ್ಯದ ಜನ ಹೇಳಿ ದಂತೆ ಕೇಳುವುದಕ್ಕೆ ನಾನು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದರು.
ಚರ್ಚೆಗೆ ಪತ್ರ ಬರೆದಿದ್ದೇನೆ: ಜನರಿಗೆ, ರಾಜ್ಯಕ್ಕೆ ಹಾಗೂ ನನಗೆ ಅವಮಾನ ಮಾಡಿದರೂ ಸಹ ಪ್ರತಿಷ್ಟೆಯ ಮೇಲೆ ನಿಲ್ಲ ಬಾರದು ಎಂದು ಗೋವಾ ಸಿಎಂಗೆ ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚೆಗೆ ಪತ್ರ ಬರೆದಿದ್ದೇನೆ. ನೀವು ಎಲ್ಲಿಗೆ, ಯಾವತ್ತು ಹೇಳುತ್ತಿರೋ ಅಲ್ಲಿಗೆ ಚರ್ಚೆಗೆ ಬರುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದೇನೆ. ಅವರಿಂದ ಯಾವಾಗ ಉತ್ತರ ಬರುತ್ತದೆ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.







