Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಚಂಗಡಿ...

ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಚಂಗಡಿ ಗ್ರಾಮ

ಅಭಿಲಾಷ್ ಟಿಅಭಿಲಾಷ್ ಟಿ23 Dec 2017 11:52 PM IST
share
ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಚಂಗಡಿ ಗ್ರಾಮ

 ಹನೂರು, ಡಿ. 23: ಕ್ಷೇತ್ರ ವ್ಯಾಪ್ತಿಯ  ಕೌದಳ್ಳಿ ಸಮೀಪದ ಕುರಟ್ಟಿ ಹೊಸೂರಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂಗಡಿ ಗ್ರಾಮ ಮಲೈಮಹದೇಶ್ವರ  ವನ್ಯಜೀವಿಯ ವಲಯ ಅರಣ್ಯದಂಚಿನಲ್ಲಿದ್ದು, ಇಲ್ಲಿನ ರಸ್ತೆ ಹದಗೆಟ್ಟಿದ್ದು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ ಸುತ್ತ ಕಾಂಡಿನಿಂದ ಕೂಡಿದ್ದು  ದಟ್ಟಾರಣ್ಯದ  ನಡುವೆ ಇರುವಂತಹ  ಕುಗ್ರಾಮ 135 ಕುಟುಂಬಗಳಿರುವ ಚಿಕ್ಕ ಗ್ರಾಮ. 

450 ಜನಸಂಖ್ಯೆ ಹೊಂದಿದ್ದು, ಕೇವಲ ಕಿರಿಯ ಪ್ರಾಥಮಿಕ ಶಾಲೆ , ಅಂಗನವಾಡಿ ಹೊಂದಿರುವ ಗ್ರಾಮ. ಯಾವುದೇ ಮೂಲಭೂತ ಸೌಕರ್ಯ ಹೊಂದದೆ,  ಸಮಾಜದ ಮುಖ್ಯ ವಾಹಿನಿಗೆ ಬಾರದ  ಮತ್ತು ಅರಣ್ಯ ಇಲಾಖೆ ಹಾಗು ಸರ್ಕಾರದ ನಡುವೆ ಸಂಘರ್ಷದ ನಡುವೆ  ಬದುಕುತ್ತಿರುವ ಮುಗ್ದ ಜನರ ಊರೇ ಈ ಗ್ರಾಮವಾಗಿದೆ. 

ಮಹದೇಶ್ವರ ಬೆಟ್ಟದ ರಸ್ತೆಯಲ್ಲಿರುವ ವಡಕೆಹಳ್ಳ ಗ್ರಾಮದಿಂದ 14 ಕಿ.ಮೀ ದೂರ ಇರುವ ಈ ಗ್ರಾಮ , ಕುರಟ್ಟಿ ಹೊಸೂರಿನ ಗ್ರಾಮ ಪಂಚಾಯತ್ ಯಿಂದ  120 ಶೌಚಾಲಯವನ್ನೇನೋ  ಕಟ್ಟಿಸಿದ್ದಾರೆ, ಆದರೆ ಇನ್ನೂ ಬಯಲಲ್ಲಿ ಶೌಚಾ ಮಾಡುವ  ಜನರಿದ್ದಾರೆ, ಕೇಳಿದರೆ  ಇದರ ಬಳಕೆ ನಮಗೆ ಇನ್ನೂ ಒಗ್ಗಿಲ್ಲ,  ಬಳಸಲು ಪ್ರಯತ್ನ ಮಾಡುತ್ತೇವೆ ಎಂದು ನಾಚಿಕೆಯಲ್ಲೇ ಉತ್ತರಿಸುತ್ತಾರೆ ಇಲ್ಲಿನ ಮುಗ್ದ ಜನರು.

ಒಂದು ಕಡೆ ಸರ್ಕಾರ  ಸ್ವಚ್ಚ ಭಾರತದಡಿ ಪ್ರತಿ ಗ್ರಾಮಗಳಲ್ಲಿ  ಸರ್ಕಾರ ಶೌಚಾಲಯಗಳನ್ನು ಪ್ರತಿ ಗ್ರಾಮಗಳನ್ನು  ಕಟ್ಟಿಸಲು ಹರ ಸಾಹಸ ಪಡುತ್ತಿದ್ದರೆ, ಇನ್ನೊಂದು ಕಡೆ ಇದು ಸರ್ಕಾರ ಮಟ್ಟದಲ್ಲಿ ಕೇವಲ ಆರ್ಥಿಕ ಮತ್ತು ಭೌತಿಕ ಪ್ರಗತಿ ಯಾಗಿ ಈ ಗ್ರಾಮದ ಜನರು ಶೌಚಾಲಯ ಬಳಸದೇ ಹೋಗಿಬಿಡುತ್ತಾರೋ ಎಂಬ ಆತಂಕ.  

ಚಂಗಡಿ ಗ್ರಾಮದ ಜನರ ಮನ ಒಲಿಸಿ ಶೌಚಾಲಯ ಕಟ್ಟಿಸಿದ್ದು ಸುಲಭದ ಮಾತಲ್ಲ, ಆದರೆ ಗ್ರಾಮದ ಕೆಲವು ಜನರು ಇನ್ನೂ ಬಯಲಲ್ಲಿ ಶೌಚ ಮಾಡುತ್ತಿರುವುದು ನನ್ನಗಮನಕ್ಕೂ ಬಂದಿದೆ, ಗ್ರಾಮದ ಜನರಲ್ಲಿ ಅರಿವಿನ ಅಗತ್ಯತೆ  ಬೇಕಾಗಿದೆ. ಇನ್ನೂ 20 ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದು, ಜಿಲ್ಲಾ ಪಂಚಾಯತಿ ಈ ಗ್ರಾಮದ ಜನರಿಗೆಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡರೆ ಖಂಡಿತಾ ನಾವೂ ಕೂಡ ಕೈ ಜೋಡಿಸುತ್ತೇವೆ- ಕುರಟ್ಟಿ ಹೊಸೂರು ಅಧ್ಯಕ್ಷ ಮುನಿಶೆಟ್ಟಿ 

  ಚಂಗಡಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಮಾಡಿರುವುದ ಉತ್ತಮ ಕೆಲಸ, ಆದರೆ ಜನರು ಕೇವಲ ಕಟ್ಟಡ ನಿರ್ಮಾಣ ಮಾಡಿ ಬಯಲಲ್ಲಿ ಶೌಚ ಮಾಡಿದರೆಯೋಜನೆಯ ಮುಖ್ಯ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಮಾರ್ಚ್ ತಿಂಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. -ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ಅಧಿಕಾರಿ ಮಾದೇಶ್

ಹನೂರು ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳು ಕಾಡಂಚಿನಲ್ಲಿದ್ದು ಇಲ್ಲಿನ ಜನರು ತುಂಬಾ ಮುಗ್ದರು ಇಲ್ಲಿನ  ಗ್ರಾಮ ಪಂಚಾಯತಿ ವತಿಯಿಂದ ಜನರಿಗೆ ಶೌಚಾಲಯವನ್ನುನಿರ್ಮಿಸಿದರೆ ಸಾಲದೂ ಅವರಲ್ಲಿ ಅದನ್ನು ಉಪಯೋಗಿಸುವುದರಿಂದ ಆಗುವ ಅನುಕೂಲದ ಅರಿವು  ಮತ್ತು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಜಿಲ್ಲಾಪಂಚಾಯತಿಯಿಂದ ಮಾಡುವುದರಿಂದ  ಈ ಯೋಜನೆಯೂ ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಲು ಸಾದ್ಯವಾಗುತ್ತದೆ.  -ನೂರುಲ್ಲಾ ಎಸ್‍ಡಿಪಿಐ ಅಧ್ಯಕ್ಷ

share
ಅಭಿಲಾಷ್ ಟಿ
ಅಭಿಲಾಷ್ ಟಿ
Next Story
X