ಟಿಪ್ಪರ್ ಲಾರಿ ಢಿಕ್ಕಿ: ದ್ವಿಚಕ್ರ ಸವಾರೆ ಮೃತ್ಯು
ಉಪ್ಪಿನಂಗಡಿ, ಡಿ. 24: ದ್ವಿಚಕ್ರ ವಾಹನವೊಂದಕ್ಕೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟು, ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ರವಿವಾರ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ. ಅಪಘಾತವೆಸಗಿದ ಟಿಪ್ಪರ್ ಲಾರಿ ನಿಲ್ಲದೆ ಸ್ಥಳದಿಂದ ಪರಾರಿಯಾಗಿದೆ.
ಮೂಲತಃ ಈಶ್ವರಮಂಗಲ ಪಡವನ್ನೂರು ಸರಕೂಟೇಲು ನಿವಾಸಿ ಶಶಿಧರ ಶೆಟ್ಟಿ ಎಂಬವರ ಪುತ್ರಿ ಲೀಲಾವತಿ (25) ಮೃತ ಸಹಸವಾರೆ ಎಂದು ಗುರುತಿಸಲಾಗಿದೆ. ಇವರ ಸಹೋದರ ಜಗದೀಶ್ ಶೆಟ್ಟಿ ಗಂಭೀರ ಗಾಯಗೊಂಡಿದ್ದಾರೆ. ಜಗದೀಶ್ ಶೆಟ್ಟಿಯೊಂದಿಗೆ ಆಕ್ಟೀವಾ ಹೋಂಡಾದಲ್ಲಿ ಸಕಲೇಶಪುರದ ಕಡೆ ಪ್ರಯಾಣಿಸುತ್ತಿದ್ದಾಗ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬರ್ಚಿನಹಳ್ಳ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





