ಉಪ್ಪಿನಂಗಡಿ: ಚಿನ್ನಾಭರಣವಿದ್ದ ಬ್ಯಾಗ್ ಕಳವು
ಉಪ್ಪಿನಂಗಡಿ, ಡಿ. 24: ಕಾಸರಗೋಡಿನಿಂದ ಉಪ್ಪಿನಂಗಡಿಯತ್ತ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಚಿನ್ನಾಭರಣವಿದ್ದ ಬ್ಯಾಗನ್ನು ಅಪಹರಿಸಿದ ಘಟನೆ ರವಿವಾರ ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಾಸರಗೋಡು ನಿವಾಸಿ ಅಜಿತ್ ಎಂಬವರ ಪತ್ನಿ ಕಸ್ತೂರಿ ಎಂಬವರು ತನ್ನ ಮಗನೊಂದಿಗೆ ತವರು ಮನೆಯಾದ ಉಪ್ಪಿನಂಗಡಿ ಸಮೀಪದ ನಿಡ್ಲೆಗೆಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಪುತ್ತೂರಿನಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ.
ಬದಿಯಡ್ಕ ಪರಿಸರದಲ್ಲಿ ಬಸ್ಸನ್ನೇರಿದ ಯುವಕ ಪುತ್ತೂರಿನಲ್ಲಿ ಮಹಿಳೆ ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಆಕೆಯ ಕೈಯಲ್ಲಿದ್ದ ಸುಮಾರು 14 ಪವನ್ ತೂಕದ ಚಿನ್ನಾಭರಣವಿದ್ದ ಬ್ಯಾಗನ್ನೇ ಎಗರಿಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





