ಬಿಜೆಪಿಯನ್ನು ಟೀಕಿಸಿದ ಸುಬ್ರಮಣಿಯನ್ ಸ್ವಾಮಿ
ಆರ್.ಕೆ.ನಗರ ಉಪಚುನಾವಣೆಯಲ್ಲಿ ‘ನೋಟಾ’ ಗಿಂತ ಕಡಿಮೆ ಮತ

ಹೊಸದಿಲ್ಲಿ.ಡಿ.24: ತಮಿಳುನಾಡಿನ ಚೆನ್ನೈನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬಿದ್ದಿರುವ ಮತಗಳಿಗಿಂತ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪಕ್ಷದ ರಾಜ್ಯ ಘಟಕವನ್ನು ಟೀಕಿಸಿದ್ದಾರೆ.
ರಾಷ್ಟ್ರೀಯ ಆಡಳಿತ ಪಕ್ಷವು ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದೆ. ಇದು ಉತ್ತರದಾಯಿತ್ವ ನಿರ್ಧಾರಕ್ಕೆ ಸಕಾಲವಾಗಿದೆ ಎಂದು ಸ್ವಾಮಿ ಟ್ವೀಟಿಸಿದ್ದಾರೆ.
ಆರ್‌ಕೆ ನಗರ ಕ್ಷೇತ್ರದಲ್ಲಿ ದಿನಕರನ್ ಕೈಮೇಲಾಗಿದೆ. 2019ರ ಲೋಕಸಭಾ ಚುನಾವಣೆಗಾಗಿ ಎಐಎಡಿಎಂಕೆಯ ಎರಡು ಬಣಗಳು ಒಂದಾಗುವುದನ್ನು ತಾನು ನಿರೀಕ್ಷಿಸುತ್ತಿದ್ದೇನೆ ಎಂದೂ ಅವರು ಟ್ವೀಟಿಸಿದ್ದಾರೆ.
Next Story





