ಈ ದೇಶದಲ್ಲಿ ಈ ವರ್ಷ ಜನನಕ್ಕಿಂತ ಮರಣ ಪ್ರಮಾಣವೇ ಅಧಿಕ!

ಟೋಕಿಯೊ,ಡಿ.24: ಜಪಾನ್‌ನಲ್ಲಿ ಈ ವರ್ಷ ಜನನಸಂಖ್ಯೆಗಿಂತ ಮರಣ ಸಂಖ್ಯೆಯೇ ಅಧಿಕವಾಗಿದ್ದು ಸರಕಾರವನ್ನು ದಿಗಿಲುಗೊಳಿಸಿದೆ. 2017ರಲ್ಲಿ 13.4 ಲಕ್ಷ ಮಂದಿ ಮೃತಪಟ್ಟಿದ್ದರೆ, ಜನಿಸಿದ ಶಿಶುಗಳ ಸಂಖ್ಯೆ ಕೇವಲ 9.41 ಲಕ್ಷ ಆಗಿದೆ. 1899ರಲ್ಲಿ ಜನಗಣತಿ ಆರಂಭಗೊಂಡ ಬಳಿಕ ಜಪಾನ್‌ನಲ್ಲಿ ಇದೇ ಮೊದಲ ಬಾರಿಗೆ ಜನನ ಸಂಖ್ಯೆಗಿಂತ ಮರಣ ಸಂಖ್ಯೆ ಅಧಿಕವಾಗಿದೆ. ಜನನ ಪ್ರಮಾಣದಲ್ಲಿ ಶೇ.4ರಷ್ಟು ಕುಸಿತವಾಗಿದ್ದರೆ, ಮರಣ ಪ್ರಮಾಣದಲ್ಲಿ 3 ಶೇಕಡ ಏರಿಕೆಯಾಗಿದೆ. ಇದೇ ವೇಳೆ 25-39 ವರ್ಷದೊಳಗಿನ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಜಪಾನ್‌ನ ಒಟ್ಟು ಜನಸಂಖ್ಯೆ 12.5 ಕೋಟಿ ಆಗಿದ್ದು, ಇದರಲ್ಲಿ ಶೇ.27.2ರಷ್ಟು ಮಂದಿ 65 ವರ್ಷಕ್ಕಿಂತ ಅಧಿಕ ವಯಸ್ಸಿನವರಾಗಿದ್ದಾರೆ. ಆದರೆ ಶೇ.12.7ರಷ್ಟು ಮಂದಿ ಮಾತ್ರ 14 ವರ್ಷ ವಯಸ್ಸಿನವರಾಗಿದ್ದಾರೆ.
Next Story





