ಕಳಸ : ವ್ಯಕ್ತಿ ನೀರು ಪಾಲು

ಸಾಂದರ್ಭಿಕ ಚಿತ್ರ
ಕಳಸ, ಡಿ.24: ಪ್ರವಾಸಕ್ಕಾಗಿ ಬಂದಿದ್ದ ಚಾಮರಾಜನಗರದ ಕಸಬ ಹೋಬಳಿಯ ಯಳುಕೂರು ನಿವಾಸಿ ವೈ.ಸಿ.ರಾಜು(29) ಎಂಬವರು ಕಳಸದ ಹಳುವಳ್ಳಿ ಎಂಬಲ್ಲಿ ಭದ್ರಾನದಿಯಲ್ಲಿ ನೀರು ಪಾಲಾದ ಘಟನೆ ನಡೆದಿದೆ.
ಸುಮಾರು 24 ಜನರ ತಂಡ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ, ಮುರ್ಡೇಶ್ವರ, ಗೋಕರ್ಣ, ಸಿಗಂದೂರು, ಕೊಲ್ಲೂರು, ಶೃಂಗೇರಿ ಪುಣ್ಯ ಕ್ಷೇತ್ರಗಳಿಗೆ ಬೇಟಿ ನೀಡಿದ್ದರು. ಕಳಸ, ಹೋರನಾಡಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕಳಸದಿಂದ 2 ಕಿ.ಮೀ ದೂರದಲ್ಲಿ ತಮ್ಮ ವಾಹನ ಕೆಟ್ಟು ನಿಂತಿತ್ತು. ಆ ಸಂದರ್ಭದಲ್ಲಿ ಪಕ್ಕದಲ್ಲಿದ್ದ ನದಿಗೆ ಸ್ನಾನಕ್ಕಾಗಿ ರಾಜು ಇಳಿದಿದ್ದಾರೆ. ಆದರೆ ಇಳಿದ ಕೂಡಲೇ ನೀರಿನ ಸೆಳೆತಕ್ಕೆ ಸಿಳುಕಿ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯ ಮುಳುಗು ತಜ್ಞ ಭಾಸ್ಕರ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಕಳಸ ಪೊಲೀಸರು ಭೆೇಟಿ ನೀಡಿದ್ದಾರೆ.
Next Story





