ಸುರತ್ಕಲ್: ನೂರುಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದಿಂದ ಮೀಲಾದ್ ಸಂದೇಶ ಕಾರ್ಯಕ್ರಮ

ಸುರತ್ಕಲ್, ಡಿ.24: ಮುಹಿಯುದ್ದೀನ್ ಜುಮಾ ಮಸೀದಿ, ಈದ್ಗಾ ಜುಮಾ ಮಸೀದಿ ಮತ್ತು ಗೌಸಯಾ ಕಾಂಪ್ಲೆಕ್ಸ್ ಇದರ ಆಡಳಿತಕ್ಕೆ ಒಳಪಟ್ಟ ತಡಂಬೈಲಿನ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮೀಲಾದ್ ಸಂದೇಶ ಕಾರ್ಯಕ್ರಮ ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ರವಿವಾರ ನಡೆಯಿತು.
ಮುಹಮ್ಮದ್ ಇಮ್ತಿಯಾಝ್ ಉಸ್ತಾದ್ 'ಪ್ರೀತಿಯ ತಾಯಿ' ವಿಷಯದಲ್ಲಿ ಮತ್ತು ಅಬ್ದುಲ್ ಜಲೀಲ್ ಸಖಾಫಿ 'ಪ್ರೀತಿಯ ಪ್ರವಾದಿ' ಎಂಬ ವಿಷಯದ ಕುರಿತು ಮಾತನಾಡಿದರು.
ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಸಅದಿ ದುಆ ನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿ ಹಾಗೂ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪಿ.ಎ.ಮುಹಮ್ಮದಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಸೀದಿಯ ಪದಾಧಿಕಾರಿಗಳು ಸೇರಿದಂತೆ ಹಲವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್, ಪ್ರ. ಕಾರ್ಯದರ್ಶಿ ಐ.ಎಚ್ ಮೊಯ್ದಿನಬ್ಬ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುಹಮ್ಮದ್ ಅಲ್ತಾಫ್, ಈದ್ಗಾ ಮಸೀದಿಯ ಖತೀಬ್ ಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ, ನೂರುಲ್ ಹುದಾ ಮದ್ರಸ ಮುಅಲ್ಲಿಂ ಎಂ.ಕೆ.ಅಬ್ದುಲ್ ಅಝೀಝ್ ಮುಸ್ಲಿಯಾರ್, ಇಡ್ಯಾ ಖಿಳಿರಿಯಾ ಮಸೀದಿಯ ಖತೀಬ್ ಹನೀಫ್ ದಾರಿಮಿ, ಖಿಳಿರಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ರಫೀಕ್, ತಡಂಬೈಲ್ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಹೈಬ್, ಕಾರ್ಯದರ್ಶಿ ಅಲ್ತಾಫ್, ಮದ್ರಸ ಆಡಳಿತ ಸಮಿತಿಯ ಸದಸ್ಯ ಮುಹಮ್ಮದ್ ತಡಂಬೈಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಳೆ ವಿದ್ಯಾರ್ಥಿ ಮುಹಮ್ಮದ್ ಸಿರಾಜ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಫಿಲ್ ಫಯಾಝ್ ಕಾರ್ಯಕ್ರಮ ನಿರೂಪಿಸಿದರು.







