ದ.ಆಫ್ರಿಕ-ಝಿಂಬಾಬ್ವೆ ಚತುರ್ದಿನ ಟೆಸ್ಟ್‌ಗೆ ಐಸಿಸಿ ಹೊಸ ನಿಯಮಾವಳಿ
ಪೋರ್ಟ್ ಎಲಿಝಬೆತ್(ದ.ಆಫ್ರಿಕ), ಡಿ.24: ದಕ್ಷಿಣ ಆಫ್ರಿಕ ಹಾಗೂ ಝಿಂಬಾಬ್ವೆ ನಡುವೆ ಏಕೈಕ ಚತುರ್ದಿನ ಟೆಸ್ಟ್ ಮಂಗಳವಾರ ಆರಂಭವಾಗಲಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆಡಲು ಕ್ರಿಕೆಟ್ ದಕ್ಷಿಣ ಆಫ್ರಿಕಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಅನುಮತಿ ನೀಡಿದೆ. ಪ್ರಾಯೋ ಗಿಕ ವಾಗಿ ನಡೆಯಲಿರುವ ನಾಲ್ಕು ದಿನಗಳ ಟೆಸ್ಟ್‌ನಲ್ಲಿ ಐಸಿಸಿ ನಿಯಮವನ್ನು ಬದಲಾವಣೆ ಮಾಡಿದೆ.
ಚತುರ್ದಿನ ಟೆಸ್ಟ್ ಪಂದ್ಯ ಪ್ರತಿದಿನ ಆರೂವರೆ ಗಂಟೆ ಕಾಲ ನಡೆಯಲಿದೆ. ಐದು ದಿನಗಳ ಪಂದ್ಯಕ್ಕಿಂತ ಅರ್ಧಗಂಟೆ ಹೆಚಿ ್ಚ ನ ಅವಧಿ ನಡೆಯಲಿದೆ. ಪ್ರತಿದಿನ 90 ಓವರ್‌ಗಳ ಬದಲಿಗೆ 98 ಓವರ್‌ಗಳ ಪಂದ್ಯ ನಡೆಯುತ್ತದೆ. ಐದು ದಿನಗಳ ಪಂದ್ಯದಂತೆಯೇ ಓವರ್ ಪೂರ್ಣಗೊಳಿಸಲು ಅರ್ಧಗಂಟೆ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದೆ. ಮೊದಲ ಎರಡು ಸೆಶನ್ಸ್‌ಗಳ ಆಟ ತಲಾ 2 ಗಂಟೆ, 15 ನಿಮಿಷಗಳ ವರೆಗೆ ನಡೆಯುತ್ತದೆ. ಮೊದಲ ಸೆಶನ್ ಬಳಿಕ ಭೋಜನ ವಿರಾಮದ ಬದಲಿಗೆ 20 ನಿಮಿಷ ಟೀ ವಿರಾಮ ಇರುತ್ತದೆ. ಎರಡನೇ ಸೆಶನ್ ಬಳಿಕ 40 ನಿಮಿಷ ಭೋಜನ ವಿರಾಮವಿರುತ್ತದೆ.
150 ರನ್ ಮುನ್ನಡೆ ಇದ್ದರೆ ಫಾಲೋ-ಆನ್ ಹೇರಬಹುದು. ಐದು ದಿನಗಳ ಪಂದ್ಯದಲ್ಲಿ 200 ರನ್ ಮುನ್ನಡೆಯಿದ್ದರೆ ಫಾಲೋ-ಆನ್‌ಗೆ ಅವಕಾಶವಿದೆ.





