ಮೊಗವೀರರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು: ನಾಡೋಜ ಡಾ. ಜಿ.ಶಂಕರ್
ಮಂಗಳೂರು, ಡಿ. 25: ಮೀನುಗಾರಿಕೆ ವೃತ್ತಿ ನಡೆಸುತ್ತಿರುವ ಇತರ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿದಂತೆ ಮೊಗವೀರ ಸಮಾಜವನ್ನೂ ಸರಕಾರ ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು. ಇದರಿಂದ ಈ ಸಮುದಾಯ ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ನಾಡೋಜ ಡಾ. ಜಿ.ಶಂಕರ್ ಹೇಳಿದರು.
ಬೋಳೂರು ಮೊಗವೀರ ಮಹಾಸಭಾವು ನಗರದ ಸುಲ್ತಾನ್‌ಬತ್ತೇರಿಯಲ್ಲಿ ಅನುಷ್ಠಾನಿಸಲಾದ ನೂತನ ಗುರುಪೀಠ ಲೋಕಾರ್ಪಣೆ, ಸಭಾಭವನಕ್ಕೆ ಶಿಲಾನ್ಯಾಸ ಹಾಗೂ ಫೆರಿ ಬೋಟ್ ಶುಭಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಗ್ರ ಮೀನುಗಾರಿಕಾ ನೀತಿ ಬಂದಾಗಲೇ ಮೀನುಗಾರರ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು. ಆದರೆ ಸರಕಾರ ಸಿಆರ್‌ಝೆಡ್-2ನಲ್ಲಿ ಮೀನುಗಾರರಿಗೆ ವಿನಾಯಿತಿ ನೀಡಬೇಕು ಎಂದು ಡಾ. ಜಿ. ಶಂಕರ್ ಒತ್ತಾಯಿಸಿದರು.
ದ.ಕ.ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಸರಳಾ ಬಿ.ಕಾಂಚನ್ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿದರು. ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಎಚ್.ಗಂಗಾಧರ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ, ಮೇಯರ್ ಕವಿತಾ ಸನಿಲ್, ಬಾರ್ಕೂರು ಬೆಣ್ಣೆಕುದ್ರು ಕುಲ ಮಹಾಸ್ತ್ರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ್ ಸಿ.ಕುಂದರ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ರಾಜಶೇಖರ್ ಕರ್ಕೇರ, ಕಾರ್ಪೊರೇಟರ್ ಲತಾ ಸಾಲ್ಯಾನ್, ಉರ್ವ ಶ್ರೀಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಯಾದವೇಶ್ ಪುತ್ರನ್, ಬೋಳೂರು ಶ್ರೀಜಾರಂದಾಯ ದೈವಸ್ಥಾನದ ಅಧ್ಯಕ್ಷ ಶ್ರೀಧರ್, ಗ್ರಾಮಸಭಾದ ಕಾನೂನು ತಜ್ಞರು ಎಸ್.ಕೆ. ಉಳ್ಳಾಲ್, ೆರಂ ಆ್ ಜಸ್ಟೀಸ್‌ನ ಅಧ್ಯಕ್ಷ ದಯಾನಾಥ್ ಕೋಟ್ಯಾನ್, ಲೆಕ್ಕಪರಿಶೋಧಕ ಎ.ಕೃಷ್ಣಮೂರ್ತಿ, ಬೋಳೂರು ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಘು ಅತಿಥಿಗಳಾಗಿ ಭಾಗವಹಿಸಿದ್ದರು.
ಮೊಗವೀರ ಮುಂದಾಳುಗಳಾದ ದೇವಾನಂದ ಗುಜರನ್, ವಿಶ್ವನಾಥ, ಜಯ ಸಿ.ಕೋಟ್ಯಾನ್, ಜಯರಾಜ್ ಅಮೀನ್, ಡಾ. ಸೋಮಶೇಖರ್ ಮೆಂಡನ್, ತಾರಾನಾಥ ಪುತ್ರನ್, ಶಿವಾಜಿ ಮೆಂಡನ್, ದೇವದಾಸ್ ಬೋಳೂರು, ಪದ್ಮನಾಭ ಪುತ್ರನ್, ಸುಭಾಷ್ ಕುಂದರ್, ಮಾಧವ ಕರ್ಕೇರ, ಸುಧೀರ್ ಶ್ರೀಯಾನ್ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಸ್ವಾಗತಿಸಿದರು. ಸದಸ್ಯ ಯಶವಂತ ಮೆಂಡನ್ ಪ್ರಸ್ತಾವನೆಗೈದರು. ಜಗದೀಶ್ ಬಂಗೇರ ವಂದಿಸಿದರು. ಸುಭಾಷ್ ಹಾಗೂ ಆರ್.ಪಿ.ಬೋಳೂರ್ ಕಾರ್ಯಕ್ರಮ ನಿರೂಪಿಸಿದರು.







