ಮಡಿಕೇರಿ: ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಎಂ.ಎಂ.ಸುಹೆಲ್ ನೇಮಕ
.jpg)
ಸುಂಟಿಕೊಪ್ಪ,ಡಿ.25: ವಿಶ್ವದಾದ್ಯಂತ ಆಚರಿಸುತ್ತಿರುವ ಕ್ರಿಸ್‍ಮಸ್ ಹಬ್ಬವು ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯ ಹಾಗೂ ಸಿಎಸ್‍ಐ ದೇವಾಲಯಗಳಿಂದ ಡಿಸೆಂಬರ್ ತಿಂಗಳಿನ ಮೊದಲ ವಾರದಿಂದಲೇ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದಾರೆ.
ಹಬ್ಬದ ಸಿದ್ದತೆಗಾಗಿ ರೋಮನ್ ಕ್ಯಾಥೊಲಿಕ್ ಹಾಗೂ ಸಿಎಸ್‍ಐ ದೇವಾಲಯ ವತಿಯಿಂದ ಕ್ರೈಸ್ತರ ಧರ್ಮಗುರುಗಳು ಹಿಂದಿನ ಕಾಲದಲ್ಲಿ ಬೈಬಲ್ ಗ್ರಂಥದಲ್ಲಿ ಬರೆದಿರುವಂತೆ ಕ್ರೈಸ್ತರ ಮನೆ ಮನೆಗೆ ತೆರಳಿ ಕ್ರಿಸ್ತನ ಶುಭ ಸಂದೇಶವನ್ನು ಸಾರುವ (ಕ್ಯಾರೋಲ್ಸ್) ಕಾರ್ಯಕ್ರಮವನ್ನು ದೇವಾಯದ ಗಾಯನ ವೃಂದವರಿಂದ ಸಂತಕ್ಲಾಸ್ ವೇಷಧಾರಿಯೊಂದಿಗೆ ಮನೆಗಳಿಗೆ ಸಂದೇಶವನ್ನು ಸಾರಿ ಶುಭಕೋರುವ ಕಾರ್ಯಕ್ರಮವನ್ನು ನಡೆಸಲಾಯಿತು.
ಗೋದಾಲಿ ನಿರ್ಮಾಣ, ದೇವಾಲಯಗಳ ಅಲಂಕಾರ ನಕ್ಷತ್ರಗಳ ಅಲಂಕಾರಗಳು ಕ್ರಿಸ್‍ಮಸ್ ಸಂಕೇತವಾಗಿದ್ದು, ಇದನ್ನು ಧರ್ಮಗರುಳು ಕ್ರೈಸ್ತರ ಮನೆಗಳಿಗೆ ಸಂತಕ್ಲಾಸ್ ವೇಷಧಾರಿಗಳು ಯೇಸುವಿನ ಜನನದ ಸಂದೇಶವನ್ನು ಸಾರಿ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಮುದಾಯದ ಬಾಂಧವರ ಮನೆಯಿಂದ ನೀಡುವ ಅತಿಥ್ಯವನ್ನು ಸ್ವೀಕರಿಸುತ್ತಾರೆ ಅಲ್ಲಿಂದ ಆರಂಭಗೊಳ್ಳುವ ಪೂಜೆ ನಿರಂತವಾಗಿ ದೇವಾಲಯದಲ್ಲೂ ತಾ. 24 ರಂದು ಮಧ್ಯರಾತ್ರಿ ಧರ್ಮಗುರುಗಳಾದ ಫಾಧರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಅವರು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಆಡಂಬರ ದಿವ್ಯ ಬಲಿಪೂಜೆ ಹಾಗೂ ಪ್ರಾರ್ಥನಾ ಪೂಜೆಯನ್ನು ನೇರವೇರಿಸಿದರು.
ವಿವಿಧ ಕಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂದವರು ದೇವಾಲಯಕ್ಕೆ ಆಗಮಿಸಿದ್ದರು. ಆನಂತರ ಧರ್ಮಗುರುಗಳು ಸಮದಾಯ ಬಾಂಧವರಿಗೆ ಪ್ರಬೋದನೆ ನೀಡಿದರು. ನಂತರ ಕ್ರೈಸ್ತ ಬಾಂದವರು ಮೊದಲಿಗೆ ಕ್ರಿಸ್ತ ಜಯಂತಿಯ ಶುಭಾಶಯ ವಿನಿಮಯ ಮಾಡುವ ಮೂಲಕ ಸಿಹಿ ಹಂಚಿಕೊಂಡು ಹಬ್ಬದ ಮುನ್ನುಡಿ ಇಟ್ಟರು.
ಕಳೆದ ಬಾರಿ ಸಂತ ಅಂತೋಣಿ ದೇವಾಲಯದಲ್ಲಿ ವಿವಿಧ ಸಮುದಾಯದವರು ನಕ್ಷತ್ರ ಅಲಂಕಾರ ಸ್ಪರ್ಧೆ ಏರ್ಪಡಿಸಿದ್ದರು. ಈ ಬಾರಿ ಯೇಸು ಬಾಲರು ಜನಿಸಿದ ಸ್ಥಳವಾದ ಗೋದಾಲಿ(ದನದ ಕೊಟ್ಟಿಗೆ) ನಿರ್ಮಾಣ ಸ್ಪರ್ದೇಗೆ ಅವಕಾಶ ಕಲ್ಪಿಸಿದ್ದು 13 ಸಮುದಾಯ ಬಾಂಧವರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ದೇವಾಲಯ ಮುಂಭಾಗದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ.







