ಉಪ್ಪಿನಂಗಡಿ : ಎಸ್‍ಡಿಪಿಐ ಸಭೆ
.jpg)
ಉಪ್ಪಿನಂಗಡಿ,ಡಿ.25: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಸಮಿತಿಯ ಸಭೆ ಎಸ್‍ಡಿಪಿಐ ವಲಯಾಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿಯಲ್ಲಿ ನಡೆಯಿತು.
ಸಭೆಯಲ್ಲಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಹಾಗೂ ಪಕ್ಷದ ದೇಣಿಗೆ ಸಂಗ್ರಹ, ಕಾರ್ಯಕರ್ತರ ಸೇರ್ಪಡೆ ಬಗ್ಗೆ ಚರ್ಚಿಸಲಾಯಿತು.
ಮುಖ್ಯ ಅತಿಥಿ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಮೀದ್ ಮೆಜೆಸ್ಟಿಕ್ ಮಾತನಾಡಿ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸಲಿದ್ದು, ರಾಜಕೀಯವಾಗಿ ಮುಸ್ಲಿಮರು ರಾಜಕೀಯ ಪ್ರಾತಿನಿಧ್ಯ ಪಡೆಯಬೇಕಾಗಿದೆ. ಮುಂಬವರು ಚುನಾವಣೆಗೆ ಈಗಿಂದಲೇ ಕಾರ್ಯಕರ್ತರು ತಯಾರಾಗಿರಬೇಕು ಎಂದರು.
ಸಭೆಯಲ್ಲಿ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಸದಸ್ಯ ಮುಸ್ತಾಫ ನಿರ್ಮಾ, ಕಣಿಯೂರು ಗ್ರಾ.ಪಂ. ಸದಸ್ಯ ಶುಕೂರ್ ಕುಪ್ಪೆಟ್ಟಿ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯೆ ಝರೀನಾ ಇಕ್ಬಾಲ್, ವಲಯ ಉಪಾಧ್ಯಕ್ಷ ಮಜೀದ್ ಮಠ, ಕಾರ್ಯದರ್ಶಿ ಇಕ್ಬಾಲ್ ಕೆಂಪಿ, ಖಜಾಂಚಿ ಯೂಸುಫ್ ಬೇರಿಕೆ ಹಾಗೂ ವಲಯ ಸದಸ್ಯರಾದ ಸುಲೈಮಾನ್ ಬಿ.ಕೆ., ಮುಸ್ತಾಫ ಲತೀಫ್, ಹಮೀದ್ ಬಿ.ಕೆ., ಇಲ್ಯಾಸ್ ಕರಾಯ, ರಫೀಕ್ ಕೊಡಿಪ್ಪಾಡಿ, ಮುನೀರ್ ಇಳಂತಿಲ, ಅಬ್ದುಲ್ಲಾ, ರಝಾಕ್ ಕುದ್ರಡ್ಕ, ಖಾದರ್ ಮುರ, ಸಿದ್ದೀಕ್ ಬಿಳಿಯೂರು, ಶರೀಫ್ ಪಾಣೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.
ಎಸ್‍ಡಿಪಿಐ ಉಪ್ಪಿನಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸ್ವಾಗತಿಸಿ, ವಂದಿಸಿದರು.







